ADVERTISEMENT

ದೊಡ್ಡಬಳ್ಳಾಪುರ | ತೋಟದಿಂದಲೇ ಟೊಮೆಟೊ, ಶುಂಠಿ ಕಳವು

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 16:45 IST
Last Updated 11 ಜುಲೈ 2023, 16:45 IST
ಟೊಮೆಟೊ (ಪ್ರಾತಿನಿಧಿಕ ಚಿತ್ರ)
ಟೊಮೆಟೊ (ಪ್ರಾತಿನಿಧಿಕ ಚಿತ್ರ)   

ದೊಡ್ಡಬಳ್ಳಾಪುರ: ತಾಲ್ಲೂಕಿನ ಲಕ್ಷ್ಮೀದೇವಿಪುರ ಮತ್ತು ನಾಗಸಂದ್ರದ ತೋಟಗಳಲ್ಲಿ ಕೊಯ್ಲಿಗೆ ಬಂದಿದ್ದ ಟೊಮೆಟೊ ಮತ್ತು ಶುಂಠಿಯನ್ನು ಭಾನುವಾರ ರಾತ್ರಿ ಕಳವು ಮಾಡಲಾಗಿದೆ. 

ಲಕ್ಷ್ಮೀದೇವಿಪುರದ ಜಗದೀಶ್‌ ಎಂಬುವರು ಒಂದು ಎಕರೆಯಲ್ಲಿ ಬೆಳೆದಿದ್ದ ಅಂದಾಜು ₹1.50 ಲಕ್ಷ ಮೌಲ್ಯದ ಟೊಮೆಟೊ ಹಾಗೂ  ನಾಗಸಂದ್ರದ ಬಸವರಾಜ ಎಂಬ ರೈತರು ನಾಟಿ ಮಾಡಿದ್ದ ₹16 ಸಾವಿರ ಮೌಲ್ಯದ ಹಸಿ ಶುಂಠಿಯನ್ನು ರಾತ್ರೋರಾತ್ರಿ ಕಟಾವು ಮಾಡಿ ತೆಗೆದುಕೊಂಡು ಹೋಗಿದ್ದಾರೆ.

ಬಸವರಾಜ ಅವರು ಎರಡೂವರೆ ತಿಂಗಳ ಹಿಂದೆಯಷ್ಟೇ ಶುಂಠಿ ನಾಟಿ ಮಾಡಿದ್ದರು. ಕೊಯ್ಲಿಗೆ ಬರಲು ಇನ್ನೂ ನಾಲ್ಕು ತಿಂಗಳು ಬೇಕಿತ್ತು.  ಇನ್ನೂ ಈಗಷ್ಟೇ ಗಡ್ಡೆ ಕಟ್ಟುತ್ತಿರುವ ಎರಡು ಚೀಲದಷ್ಟು ಎಳೆಯ ಶುಂಠಿಯನ್ನು ರಾತ್ರಿ ವೇಳೆ ಸಸಿಗಳ ಸಮೇತ ಕಿತ್ತೊಯ್ಯಲಾಗಿದೆ. ಈ ಬಗ್ಗೆ ದೂರು ದಾಖಲಾಗಿಲ್ಲ. ಟೊಮೆಟೊ ಕಳುವಾದ ಬಗ್ಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದರು ಎಂದು ಜಗದೀಶ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.