
ಬೇಗೂರು(ಹೊಸಕೋಟೆ): ತಾಲ್ಲೂಕಿನ ಸೂಲಿಬೆಲೆ ಹೋಬಳಿ ಬೇಗೂರು ಗ್ರಾಮದಲ್ಲಿ ದೊಡ್ಡಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ಮುನೇಶ್ವರಸ್ವಾಮಿ ಪೂಜೆ ಹಾಗೂ ದೊಡ್ಡಮ್ಮ ದೇವರ ವಿಶೇಷ ಪೂಜೆ ಏರ್ಪಡಿಸಲಾಗಿದೆ.
ಜಾತ್ರಾ ಪ್ರಯುಕ್ತ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಹರಿಕೆ ತೀರಿಸಿಕೊಳ್ಳುವುದು ಇಲ್ಲಿನ ವಿಶೇಷ. ಅಲ್ಲದೆ, ದೊಡ್ಡಮ್ಮ ದೇವರ ಉತ್ಸವಮೂರ್ತಿಯನ್ನು ಚಿಕ್ಕ ವೆಂಕಟರವಣಪ್ಪ (ಪೂಜಾರಪ್ಪ) ಅವರ ಮನೆಯಿಂದ ದೇವಸ್ಥಾನದರೆಗೂ ಮೆರವಣಿಗೆ ಮಾಡಲಾಗುವುದು.
ಜಾತ್ರೆ ಪ್ರಯುಕ್ತ ಬೆಳಿಗ್ಗೆ 10.30ಕ್ಕೆ ದೊಡ್ಡಮ್ಮ ದೇವರಿಗೆ ದೀಪೋತ್ಸವ ಮತ್ತು ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ ಎಂದು ವೆಂಕಟೇಶ್ ಬಿ.ಆರ್ (ಟೆಂಪೊ) ತಿಳಿಸಿದ್ದಾರೆ. ಗ್ರಾಮಸ್ಥರಾದ ಅವಿನಕುಮಾರ್, ಶಿವಣ್ಣ, ಮೋಹನ್, ಎಚ್ ಅಶ್ವಥ್ ಮತ್ತಿತರರು ಇದ್ದರು.
ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ, ಮಾಜಿ ಸಂಸದ ಬಿ.ಎನ್ ಬಚ್ಚೇಗೌಡ, ಬಮುಲ್ ನಿರ್ದೇಶಕ ಬಿ.ವಿ ಸತೀಶ್ ಗೌಡ, ಸೂಲಿಬೆಲೆ ಯುವ ಮುಖಂಡ ನಾರಾಯಣಗೌಡ ಇತರರು ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.