ADVERTISEMENT

ಆನೇಕಲ್: ಕಾಸುಕೊಟ್ಟು ಪೊರಕೆ ಏಟು ತಿಂದ ಭಕ್ತರು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:24 IST
Last Updated 12 ಏಪ್ರಿಲ್ 2025, 15:24 IST
<div class="paragraphs"><p>ಆನೇಕಲ್ ತಾಲ್ಲೂಕಿನ ಕರಗ ಮಹೋತ್ಸವದ ಕೋಟೆಜಗಳದಲ್ಲಿ ಕಾಸುಕೊಟ್ಟು ಪೊರಕೆ ಮೊರದಿಂದ ಹೊಡೆಯಿಸಿಕೊಳ್ಳುತ್ತಿರುವ ಭಕ್ತರು</p></div>

ಆನೇಕಲ್ ತಾಲ್ಲೂಕಿನ ಕರಗ ಮಹೋತ್ಸವದ ಕೋಟೆಜಗಳದಲ್ಲಿ ಕಾಸುಕೊಟ್ಟು ಪೊರಕೆ ಮೊರದಿಂದ ಹೊಡೆಯಿಸಿಕೊಳ್ಳುತ್ತಿರುವ ಭಕ್ತರು

   

ಆನೇಕಲ್: ತಾಲ್ಲೂಕಿನ ಮಾಯಸಂದ್ರ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿ ಕರಗ ಮಹೋತ್ಸವ ಅಂಗವಾಗಿ ಶನಿವಾರ ನಡೆದ ಕೋಟೆ ಜಗಳದಲ್ಲಿ ಭಕ್ತರು ಕಾಸು ಕೊಟ್ಟು ಪೊರಕೆ, ಮೊರದಲ್ಲಿ ಹೊಡೆಸಿಕೊಂಡರು.

ವಿವಿಧ ಗ್ರಾಮಗಳ ಸಹಸ್ರಾರು ಭಕ್ತರು ಕೋಟೆ ಜಗಳದಲ್ಲಿ ಭಾಗಿಯಾಗಿ, ಒಳ್ಳೆಯದಾಗಲಿ ಎಂದು ಪೊರಕೆಯಲ್ಲಿ ಹೊಡೆಸಿಕೊಂಡರು.

ADVERTISEMENT

ತಾಲ್ಲೂಕಿನ ಮಾಯಸಂದ್ರದ ಧರ್ಮರಾಯಸ್ವಾಮಿ ದೇವಾಲಯದ ಮುಂಭಾಗದ ಮೈದಾನದಲ್ಲಿ ಮಂಗಳವಾರ ಕೋಟೆ ಜಗಳವೆಂಬ ವಿಶಿಷ್ಟ ಧಾರ್ಮಿಕ ಆಚರಣೆ ನಡೆಯಿತು.  ಕೋಟೆ ಜಗಳದ ಪ್ರಮುಖ ಆಚರಣೆಯೆಂದರೆ ಪೊರಕೆ ಮೊರದಲ್ಲಿ ಹೊಡೆಸಿಕೊಳ್ಳುವುದು.

ದೇವಾಲಯ ವ್ಯಕ್ತಿಯೊಬ್ಬರು ಪೊರಕೆ ಮೊರವನ್ನಿಡಿದು ಸುತ್ತುತ್ತಿರುತ್ತಾರೆ. ಜನರು ಹಣ ನೀಡಿ ಪೊರಕೆ, ಮೊರದಲ್ಲಿ ಹೊಡೆಸಿಕೊಳ್ಳುತ್ತಾರೆ. ಹಾಗಾಗಿ ಈ ವ್ಯಕ್ತಿಯು ಸುತ್ತು ಹಾಕುತ್ತಾ ಬರುತ್ತಿದ್ದಂತೆ ಗಡಿಯ ಹೊರಗಡೆ ನಿಂತಿರುವ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಹಣ ನೀಡಿ ಪೊರಕೆ, ಮೊರದಲ್ಲಿ ಹೊಡೆಸಿಕೊಳ್ಳಲು ಮುಗಿಬಿದ್ದರು.

ಕರಗ ಮಹೋತ್ಸವ ಆಚರಣೆಯು ಮಹಾಭಾರತದ ಹಲವು ಘಟನೆಗಳನ್ನು ನೆನಪಿಸುತ್ತದೆ. ಅರ್ಜುನ ಮರ ಏರುವುದು, ವೀರ ಅಭಿಮನ್ಯು ಪದ್ಮವ್ಯೂಹ ಭೇದಿಸುವುದು ಸೇರಿದಂತೆ ಹಲವು ಘಟನೆಯನ್ನು ಮಹೋತ್ಸವದಲ್ಲಿ ಮರುಸೃಷ್ಟಿ ಮಾಡಲಾಗುತ್ತದೆ.

‌ಕೋಟೆ ಜಗಳ ಅಥವಾ ವೀರ ಅಭಿಮನ್ಯು ಪದ್ಮವ್ಯೂಹ ಭೇದಿಸುವುದು ಎಂಬ ಆಚರಣೆ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೃಷ್ಣ, ದ್ರೌಪದಿ, ಪಾಂಡವರ ಉತ್ಸವ ಮೂರ್ತಿಗಳನ್ನು ಇಡಲಾಗಿತ್ತು. ಕರಗ ಹೊತ್ತ ಗುರುಮೂರ್ತಿ ಅವರು ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಬಂದಿದ್ದ ಭಕ್ತರನ್ನು ಹರಸಿದಿರು. ಗಡಿಯ ಸುತ್ತಲೂ ಸುತ್ತುವ ಸಂದರ್ಭದಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಹಾಗೂ ಗಂಟೆಯ ನೀನಾದ ನಿರಂತರವಾಗಿ ನಡೆಯುತ್ತಿತ್ತು. ಕರಗ ಹೊತ್ತ ವೆಂಕಟೇಶ್‌ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕೋಟೆ ಜಗಳದಲ್ಲಿ ಮಾಯಸಂದ್ರ ಕರಗ ಮಹೋತ್ಸವದ ಪ್ರಯುಕ್ತ ಸ್ಥಾಪಿಸಲಾಗಿದ್ದ ಬಲರಾಮನ ಶಿರಚ್ಛೇದನ ಮಾಡಲಾಯಿತು.

ಕರಗ ಮಹೋತ್ಸವದ ಪ್ರಯುಕ್ತ ಸ್ಥಾಪಿಸಲಾಗಿದ್ದ ಬಲರಾಮನ ವಿಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.