ADVERTISEMENT

ಗೋಸಾಯಿಕುಂಟೆ ಪುನ:ಶ್ಚೇತನಕ್ಕೆ ಚಾಲನೆ

ನೀರಿಗೆ ಅಭಾವ ಇರುವ ದಿನಗಳಲ್ಲಿ ಜಲಮೂಲ ಸಂರಕ್ಷಿಸುವುದು ಅಗತ್ಯ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 15:03 IST
Last Updated 9 ಫೆಬ್ರುವರಿ 2019, 15:03 IST
ಗೋಸಾಯಿಕುಂಟೆ ಪುನಃಶ್ಚೇತನಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು
ಗೋಸಾಯಿಕುಂಟೆ ಪುನಃಶ್ಚೇತನಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು   

ದೊಡ್ಡಬಳ್ಳಾಪುರ: ಸರ್ಕಾರ ಬಜೆಟ್‍ನಲ್ಲಿ ಕೆರೆಗಳ ಪುನಃಶ್ಚೇತನಕ್ಕೆ ಒತ್ತು ನೀಡಿದೆ. ತಾಲ್ಲೂಕಿನ 5ಕೆರೆಗಳ ಪುನಃಶ್ಚೇತನಕ್ಕೆ ತಲಾ 1ಕೋಟಿ ಅನುದಾನ ನೀಡಿದೆ. ಅಲ್ಲದೆ, ನಾಗರಕೆರೆ ಪುನಶ್ಚೇತನಕ್ಕೂ ಹಣ ಮಂಜೂರಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನಗರದ ಪುರಾತನ ನಾಗರಕೆರೆಗೆ ಹೊಂದಿಕೊಂಡಿರುವ ಗೋಸಾಯಿಕುಂಟೆ ಪುನಃಶ್ಚೇತನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಕೆರೆಗಳ ಹೂಳೆತ್ತಲು 20 ಕೋಟಿ ಅನುದಾನ ಮೀಸಲಿಟ್ಟಿರುವುದು ಸಂತಸದ ಸಂಗತಿ. ನೀರಿಗೆ ಅಭಾವವಾಗಿರುವ ಇಂದಿನ ದಿನಗಳಲ್ಲಿ ಜಲಮೂಲ ಸಂರಕ್ಷಿಸಿಕೊಳ್ಳುವ ಅಗತ್ಯವಿದೆ. ನಮ್ಮ ಪೂರ್ವಜರು ಕಂಡುಕೊಂಡಿದ್ದ ನೀರಿನ ಸೆಲೆಗಳನ್ನು ಪುನಃಶ್ಚೇತನಗೊಳಿಸುವ ಕೆಲಸಕ್ಕೆ ಮುಂದಾಗುವುದು ಅನಿವಾರ್ಯವಾಗಿದೆ ಎಂದರು.

ADVERTISEMENT

‘ನಗರ ಬೆಳೆದಂತೆ ಜನರಿಗೆ ಸಿಹಿ ನೀರು ಪೂರೈಕೆಗಾಗಿ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ನೀಲಕಂಠಯ್ಯ, ಎಂ.ಟಿ.ಶ್ರೀಕಂಠಯ್ಯ ಅವರ ಆಡಳಿತದ ಅವಧಿಯಲ್ಲಿ ಗೋಸಾಯಿಕುಂಟೆ ಅಭಿವೃದ್ಧಿಗೊಳಿಸಿ ಕಲ್ಲುಕಟ್ಟಡ ನಿರ್ಮಿಸಿದ್ದರು. ಆದರೆ, ನಗರ ಬೃಹದಾಕಾರವಾಗಿ ಬೆಳೆದ ನಂತರ ಕೆರೆಗೆ ನೀರಿನ ಒಳ ಅರಿವು ನಿಂತು ಹೋಗಿ ಶಿಥಿಲವಾಗಿದೆ. ಪೂರ್ವಜರು ಕಂಡುಕೊಂಡಿದ್ದ ನೀರಿನ ಸೆಲೆಗಳನ್ನು ಪುನಃಶ್ಚೇತನಗೊಳಿಸುತ್ತಿರುವುದು ಅರ್ಥಪೂರ್ಣವಾಗಿದೆ’ ಎಂದು ನಗರಸಭೆ ಸದಸ್ಯ ಶಿವಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಹಾಯಕ ಅಧಿಕಾರಿ ಎಂ.ಸಿ.ನರಸಿಂಹಮೂರ್ತಿ, ತಹಶೀಲ್ದಾರ್ ಎಂ.ಕೆ.ರಮೇಶ್, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀನ ನಟರಾಜ್, ಸದಸ್ಯರಾದ ವಡ್ಡರಹಳ್ಳಿರವಿ, ಲೋಕೇಶ್ ಬಾಬು, ಕೆಪಿಸಿಸಿ ಸದಸ್ಯರಾದ ಜಿ.ಲಕ್ಷ್ಮೀಪತಿ, ಎಂ.ಜಿ.ಶ್ರೀನಿವಾಸ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕೆ.ಜಿ.ಅಶೋಕ್, ಪ್ರಧಾನ ಕಾರ್ಯದರ್ಶಿ ಯೋಗ ನಟರಾಜ್, ಅಂಜನಮೂರ್ತಿ, ವಿನೋದ್, ರಾಮಾಂಜನಮೂರ್ತಿ, ಬಿ.ಮುನಿರಾಜು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ ಅನಂತರಾಮ್, ನಾಗದಳ ಸಂಚಾಲಕ ಸುಂ.ಸು.ಬದ್ರೀನಾಥ್, ಸಿ.ನಟರಾಜ್, ಪರಿಸರ ಸಿರಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಕೃಷ್ಣಮೂರ್ತಿ, ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.