ADVERTISEMENT

ಪೊಲೀಸ್, ಸಾರಿಗೆ ಇಲಾಖೆಯಿಂದ ಡಿಎಲ್ ಆಂದೋಲನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 12:56 IST
Last Updated 20 ಸೆಪ್ಟೆಂಬರ್ 2019, 12:56 IST
ಆನೇಕಲ್ ತಾಲ್ಲೂಕಿನ ಹಳೇ ಚಂದಾಪುರದ ಸನ್‌ ಪ್ಯಾಲೇಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಡಿಎಲ್ ಆಂದೋಲನದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು
ಆನೇಕಲ್ ತಾಲ್ಲೂಕಿನ ಹಳೇ ಚಂದಾಪುರದ ಸನ್‌ ಪ್ಯಾಲೇಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಡಿಎಲ್ ಆಂದೋಲನದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು   

ಆನೇಕಲ್: ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಅಡಿಯಲ್ಲಿ, ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ವಾಹನ ಚಾಲನಾ ಪರವಾನಗಿ ಮಾಡಿಸಿಕೊಡುವ ಸಲುವಾಗಿ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ವತಿಯಿಂದ ಡಿಎಲ್ ಆಂದೋಲನ ತಾಲ್ಲೂಕಿನ ಹಳೇಚಂದಾಪುರದ ಸನ್‌ ಪ್ಯಾಲೇಸ್‌ನಲ್ಲಿ ನಡೆಯಿತು.

ಬೆಳಗಿನಿಂದಲೂ ಸರತಿ ಸಾಲಿನಲ್ಲಿ ನಿಂತು ನೂರಾರು ಮಂದಿ ಡಿಎಲ್‌ಗೆ ಹೆಸರು ನೋಂದಾಯಿಸಿದರು. 860 ಮಂದಿ ಒಂದೇ ದಿನದಲ್ಲಿ ಎಲ್‌ಎಲ್‌ ಪಡೆದರು. ಏಳು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಸಾರ್ವಜನಿಕರು ಸೌಲಭ್ಯ ಪಡೆಯಲು ಸೂರ್ಯಸಿಟಿ ಪೊಲೀಸ್ ಠಾಣೆ ಪೊಲೀಸರು ಅನುಕೂಲ ಕಲ್ಪಿಸಿದ್ದರು.

ಎಸ್‌ಪಿ ರವಿ.ಡಿ.ಚನ್ನಣ್ಣನವರ್ ಮಾತನಾಡಿ, ‘ದಂಡ ವಿಧಿಸುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಸಾರಿಗೆ ಇಲಾಖೆ ಕೈಜೋಡಿಸಿದ್ದು ಅರ್ಹರಿಗೆ ಡಿಎಲ್‌ ದೊರೆಯುವಂತೆ ಮಾಡಲು ಶ್ರಮಿಸಲಾಗುತ್ತಿದೆ. ಯಾವುದೇ ಮಧ್ಯವರ್ತಿಗಳಿಲ್ಲದೆ ಸುಗಮವಾಗಿ ಚಾಲನಾ ಪರವಾನಗಿ ಪಡೆಯಲು ಇಲಾಖೆ ನೆರವಾಗಿದೆ’ ಎಂದರು.

ADVERTISEMENT

ಸೂರ್ಯಸಿಟಿ ಸರ್ಕಲ್‌ ಇನ್‌ಸ್ಪೆಕ್ಟರ್‌ ವಿಕ್ಟರ್‌ ಸೈಮನ್‌, ಸಾರಿಗೆ ಇಲಾಖೆ ಅಧಿಕಾರಿ ನಾಗಿರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.