ADVERTISEMENT

ದೇವನಹಳ್ಳಿ: ಶತಕ ಭಾರಿಸಿದ ಕಡಲೆಕಾಯಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 13:53 IST
Last Updated 4 ಅಕ್ಟೋಬರ್ 2024, 13:53 IST
ವಿಜಯಪುರದಲ್ಲಿ ಮಾರಾಟ ಮಾಡುತ್ತಿದ್ದ ಕಡಲೆಕಾಯಿ
ವಿಜಯಪುರದಲ್ಲಿ ಮಾರಾಟ ಮಾಡುತ್ತಿದ್ದ ಕಡಲೆಕಾಯಿ   

ವಿಜಯಪುರ(ದೇವನಹಳ್ಳಿ): ಮಳೆಯ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ನೆಲಗಡಲೆ ಇಳುವರಿ ನೀಡದ ಕಾರಣ ಕಡಲೆಕಾಯಿ ಬೆಲೆ ಕೆ.ಜಿ.ಗೆ ₹120 ಏರಿಕೆಯಾಗಿದೆ.

ಎರಡು ವಾರಗಳ ಹಿಂದೆ ₹40–50 ಇದ್ದ ಕೆ.ಜಿ ಕಡಲೆಕಾಯಿ ಕಳೆದ ಹದಿನೈದು ದಿನಗಳಿಂದ ಏರಿಕೆಯಾಗುತ್ತಲೆ ಇದೆ.

ಸ್ಥಳೀಯ ಮಾರುಕಟ್ಟೆಗೆ ಕಡಲೆಕಾಯಿ ಬರುವುದಕ್ಕೆ ಇನ್ನೂ ತಿಂಗಳು ಕಾಯಬೇಕು. ಹೀಗಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕಾಯಿಯನ್ನು ಸ್ಥಳೀಯ ವ್ಯಾಪಾರಿಗಳು ಖರೀದಿಸಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.‌

ADVERTISEMENT

ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಮಾಡಿಕೊಳ್ಳೋಣವೆಂದರೆ ಮಳೆ ಇಲ್ಲ. ಹಿಂದೂಪುರಕ್ಕೆ ಹೋಗಿ ಕಡಲೆಕಾಯಿ ಮೂಟೆಗಳನ್ನು ಖರೀದಿಸಿಕೊಂಡು ಬಂದು, ಬಾಡಿಗೆಗೆ ಆಟೊ ತೆಗೆದುಕೊಂಡು, ಹಳ್ಳಿ, ಹಳ್ಳಿಗೆ ಸುತ್ತಿ ಮಾರಾಟ ಮಾಡುತ್ತಿದ್ದೇನೆ. ಒಂದು ಕೆ.ಜಿಗೆ ₹120ಗೆ ಮಾರಾಟ ಮಾಡುತ್ತಿದ್ದೇನೆ. ಮಾರುಕಟ್ಟೆಯಲ್ಲಿ ಖರೀದಿಸಿಕೊಂಡು ಇಲ್ಲಿಗೆ ತರುವಷ್ಟರಲ್ಲಿ ಕೆ.ಜಿ.ಗೆ ₹80 ತಗಲುತ್ತದೆ.  ಪೆಟ್ರೋಲ್ ಖರ್ಚು, ಕೂಲಿ, ಊಟ ಎಲ್ಲಾ ಕಳೆದರೆ ಮಾರಾಟ ಮಾಡುತ್ತಿರುವ ಬೆಲೆಯಲ್ಲಿ ಕೆ.ಜಿ.ಗೆ ₹10 ಲಾಭ ಸಿಗುತ್ತದೆ ಎನ್ನುತ್ತಾರೆ ವ್ಯಾಪಾರಿ ನರಸಿಂಹಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.