ADVERTISEMENT

ಶಿಕ್ಷಣ, ಮಾಹಿತಿ ಜತೆ ವೈವಿಧ್ಯಮಯ ಊಟ

ದೊಡ್ಡಬಳ್ಳಾಪುರದ 28ನೇ ಜಾಂಬೋರೇಟ್‌ನಲ್ಲಿ ವಿಜ್ಞಾನ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 9:36 IST
Last Updated 30 ಡಿಸೆಂಬರ್ 2019, 9:36 IST
ಊಟಕ್ಕೆ ಶಿಸ್ತಾಗಿ ನಿಂತಿರುವ ವಿದ್ಯಾರ್ಥಿಗಳು
ಊಟಕ್ಕೆ ಶಿಸ್ತಾಗಿ ನಿಂತಿರುವ ವಿದ್ಯಾರ್ಥಿಗಳು   

ದೊಡ್ಡಬಳ್ಳಾಪುರ: ನಗರದ ಆನಿಬೆಸೆಂಟ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ 28ನೇ ಜಾಂಬೋರೇಟ್‌ನಲ್ಲಿ ಭಾನುವಾರವು ಸಹ ವಿವಿಧ ಸಾಹಸ ಕ್ರೀಡೆಗಳು, ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಣೆಗಳು ನಡೆದವು.

ಹಗ್ಗದ ಮೇಲೆ ನಡೆಯುವ ಸಾಹಸ ಕ್ರೀಡೆಯಲ್ಲಿ ಹೆಣ್ಣು ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು ಕಂಡು ಬಂತು. ಹಗ್ಗದ ಮೇಲೆ ಕುಳಿತು ಜೋಕಾಲಿ ಆಟವಾಡಿ ಖುಷಿಪಟ್ಟರು.

ಈ ಬಾರಿಯ ಜಾಂಬೋರೇಟ್‌ನಲ್ಲಿ ವಿವಿಧ ಇಲಾಖೆಗಳಿಂದ ಮಳಿಗೆಗಳನ್ನು ತೆರೆದು ಸರ್ಕಾರದ ಕಾರ್ಯಕ್ರಮಗಳ ಪರಿಚಯ ಒಂದು ಕಡೆಯಾದರೆ, ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಇರುವ ವಿಜ್ಞಾನ ವಸ್ತು ಪ್ರದರ್ಶನಗಳು ಮಾಹಿತಿ ಪೂರ್ಣವಾಗಿದ್ದವು.

ADVERTISEMENT

ಸಮೀಪದಲ್ಲೇ ತಿಂಡು ತಿನಿಸುಗಳ ಮಳಿಗೆ ತೆರೆಯುವುದನ್ನು ಈ ಬಾರಿ ನಿಷೇಧಿಸಲಾಗಿದೆ. ಶಿಬಿರಕ್ಕೆ ಬಂದಿರುವ ಮಕ್ಕಳು ಅಂಗಡಿಯಲ್ಲಿನ ವಿವಿಧ ಕುರುಕಲು ತಿನಿಸುಗಳನ್ನು ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಹೀಗಾಗಿ ನಾವೇ ಈ ಬಾರಿ ಮಕ್ಕಳಿಗೆ ಊಟಕ್ಕೂ ಮುನ್ನ ಸೀಬೆ, ಬಾಳೆ ಹೀಗೆ ಸ್ಥಳೀಯವಾಗಿ ಬೆಳೆಯುವ ವಿವಿಧ ಹಣ್ಣುಗಳನ್ನು ನೀಡುತಿದ್ದೇವೆ ಎನ್ನುತ್ತಾರೆ ಆಯೋಜಕರು.

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬಂದಿರುವುದರಿಂದ ಊಟದಲ್ಲಿ ಆಯಾ ಜಿಲ್ಲೆಗಳ ವಿಶಿಷ್ಟವಾದ ಊಟದ ಸವಿಯನ್ನು ಸವಿಯಬಹುದಾಗಿದೆ. ಕಡಕ್‌ ರೊಟ್ಟಿಯಿಂದ ಮೊದಲುಗೊಂಡು ಸ್ಥಳೀಯ ಚಿತ್ರಾನ್ನ, ಪಲಾವ್‌ ವರೆಗೂ ತಿಂಡಿಗಳನ್ನು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.