ADVERTISEMENT

ಆನೇಕಲ್‌ ಬಳಿ ಮತ್ತೆ ಆನೆಗಳ ಹಿಂಡು

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 19:24 IST
Last Updated 4 ಜನವರಿ 2022, 19:24 IST
ಆನೇಕಲ್ ತಾಲ್ಲೂಕಿನ ಸೋಲೂರು ಬಳಿ ರಸ್ತೆಯಲ್ಲಿ ಮಂಗಳವಾರ ಕಂಡು ಬಂದ ಕಾಡಾನೆಗಳ ಹಿಂಡು
ಆನೇಕಲ್ ತಾಲ್ಲೂಕಿನ ಸೋಲೂರು ಬಳಿ ರಸ್ತೆಯಲ್ಲಿ ಮಂಗಳವಾರ ಕಂಡು ಬಂದ ಕಾಡಾನೆಗಳ ಹಿಂಡು   

ಆನೇಕಲ್ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಆಹಾರ ಅರಸಿ ಮರಿಗಳ ಸಮೇತ ಸೋಮವಾರದಿಂದ ಆನೇಕಲ್‌ ಬಳಿ ಬೀಡುಬಿಟ್ಟಿದ್ದಕಾಡಾನೆಗಳ ಹಿಂಡನ್ನು ಅರಣ್ಯ ಅಧಿಕಾರಿಗಳು ಮರಳಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರು ಮರಿಗಳೊಂದಿಗೆ ಬಂದ 31 ಕಾಡಾನೆಗಳ ಹಿಂಡು ಬೆಳಗಾದರೂ ಕಾಡಿನತ್ತ ತೆರಳದೆಮೆಣಸಿಗನಹಳ್ಳಿಯ ನೀಲಗಿರಿ ತೋಪುಗಳಲ್ಲಿ ಬಿಡಾರ ಹೂಡಿತ್ತು. ರಾತ್ರಿ ಸುತ್ತಮುತ್ತಲ ಜಮೀನಿನಲ್ಲಿದ್ದ ಚಪ್ಪರ ಬದನೆ, ಟೊಮೆಟೊ, ರಾಗಿ ಮೆದೆಯನ್ನು ತಿಂದು ಹಾಕಿವೆ.

ಸುದ್ದಿ ತಿಳಿದ ಸುತ್ತಮುತ್ತಲ ಗ್ರಾಮಗಳ ಜನರು ಗುಂಪುಗುಂಪಾಗಿ ತೋಪಿನ ಬಳಿ ಜಮಾಯಿಸಿದ್ದರಿಂದ ಬೆದರಿದ ಹಿಂಡು ಮರಿಗಳೊಂದಿಗೆ ಅತ್ತಿಂದಿತ್ತ ಓಡಾಡತೊಡಗಿತು. ಮೊಬೈಲ್‌ನಲ್ಲಿ ವಿಡಿಯೊ ಮತ್ತು ಚಿತ್ರ ತೆಗೆಯಲು ಮುಂದಾದ ಜನರತ್ತ ನುಗ್ಗಿ ಹೋದವು.

ADVERTISEMENT

ಆನೆಗಳ ಹಿಂಡಿಗಿಂತ ಜನರ ಗುಂಪು ನಿಭಾಯಿಸುವುದೇ ಅರಣ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಸಿಬ್ಬಂದಿಗೆ ಸವಾಲಾಗಿತ್ತು. ಸಂಜೆ ವೇಳೆಗೆ ಪಟಾಕಿ ಸಿಡಿಸಿ ಆನೆಗಳ ಹಿಂಡನ್ನು ತಮಿಳುನಾಡಿನ ಗುಮ್ಮಳಾಪುರ ಕಾಡಿನತ್ತ ಓಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.