ADVERTISEMENT

ಔಷಧಿ ತಯಾರಿಕೆ ಕಾರ್ಖಾನೆ ಬೆಂಕಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 5:10 IST
Last Updated 22 ನವೆಂಬರ್ 2020, 5:10 IST
ಜಿಗಣಿ ಕೈಗಾರಿಕಾ ಪ್ರದೇಶದ ಸ್ಟೆಲೆನ್ಸ್ ಫಾರ್ಮಾ ಸೈನ್ಸ್ ಔಷಧಿ ತಯಾರಿಕೆ ಕಟ್ಟಡದಲ್ಲಿ ಕಾಣಿಸಿಕೊಂಡಿರುವ ಬೆಂಕಿ
ಜಿಗಣಿ ಕೈಗಾರಿಕಾ ಪ್ರದೇಶದ ಸ್ಟೆಲೆನ್ಸ್ ಫಾರ್ಮಾ ಸೈನ್ಸ್ ಔಷಧಿ ತಯಾರಿಕೆ ಕಟ್ಟಡದಲ್ಲಿ ಕಾಣಿಸಿಕೊಂಡಿರುವ ಬೆಂಕಿ   

ಆನೇಕಲ್:ಜಿಗಣಿ ಕೈಗಾರಿಕಾ ಪ್ರದೇಶದ ಔಷಧ ತಯಾರಿಕಾ ಕಾರ್ಖಾನೆಯಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಸ್ಟೆಲೆನ್ಸ್ ಫಾರ್ಮಾ ಸೈನ್ಸ್ ಔಷಧಿ ತಯಾರಿಕೆ ಕಾರ್ಖಾನೆಯಲ್ಲಿಮಧ್ಯಾಹ್ನ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಕಾರ್ಖಾನೆಯ ಎಲ್ಲ ಭಾಗಗಳನ್ನೂ ಆವರಿಸಿತು.

ಕಾರ್ಖಾನೆಯಲ್ಲಿ ಸಿಬ್ಬಂದಿ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಕಾರ್ಖಾನೆ ಮೂರು ಅಂತಸ್ತಿನ ಕಟ್ಟಡ ಬೆಂಕಿಗೆ ಆಹುತಿಯಾಗಿದೆ. ಔಷಧಿ ಪಟ್ಟಿಗೆ, ಕಚ್ಚಾ ಸಾಮಗ್ರಿ, ಪೀಠೋಪಕರಣ ನಾಶವಾಗಿವೆ. ನಷ್ಟದ ಅಂದಾಜು ನಡೆಯುತ್ತಿದೆ. ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.