ADVERTISEMENT

ನ್ಯಾಯಕ್ಕಾಗಿ ನೀರಿನ ಟ್ಯಾಂಕ್ ಏರಿ ಕುಳಿತು ಆತ್ಮಹತ್ಯೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 8:30 IST
Last Updated 25 ಏಪ್ರಿಲ್ 2022, 8:30 IST
ದೊಡ್ಡಬಳ್ಳಾಪುರದ ನೀರಿನ ಟ್ಯಾಂಕ್ ಮೇಲೆ ಕುಳಿತು ಆತ್ಮಹತ್ಯೆ ಬೆದರಿಕೆ ಒಡ್ಡುತ್ತಿರುವ ಆಂಜನೇಯ ರೆಡ್ಡಿ ಕುಟುಂಬದ ಸದಸ್ಯರು
ದೊಡ್ಡಬಳ್ಳಾಪುರದ ನೀರಿನ ಟ್ಯಾಂಕ್ ಮೇಲೆ ಕುಳಿತು ಆತ್ಮಹತ್ಯೆ ಬೆದರಿಕೆ ಒಡ್ಡುತ್ತಿರುವ ಆಂಜನೇಯ ರೆಡ್ಡಿ ಕುಟುಂಬದ ಸದಸ್ಯರು   

ದೊಡ್ಡಬಳ್ಳಾಪುರ: ಜಮೀನು ವಿಚಾರದಲ್ಲಿ ನಿವೃತ್ತ ಡಿವೈಎಸ್ಪಿ ಟಿ.ಕೋನಪ್ಪರೆಡ್ಡಿ ಅವರುಮೋಸ ಮಾಡಿದ್ದು ನ್ಯಾಯ ದೊರಕಿಸುವಂತೆ ಒತ್ತಾಯಿಸಿ ಚಿಂತಾಮಣಿ ಮೂಲದ ಕುಟುಂಬವೊಂದುನಗರದಲ್ಲಿನ ಜಿಕೆವಿ ಲೇ ಔಟ್ ( ಕೆ.ಆರ್.ಎನ್.ಲೋಕ) ದಲ್ಲಿನ ನೀರಿನ ಟ್ಯಾಂಕ್ ಮೇಲೆ ಕುಳಿತು ಬೆದರಿಕೆಒಡ್ಡಿದ ನಾಟಕೀಯ ಪ್ರಸಂಗ ಸೋಮವಾರ ಬೆಳಿಗ್ಗೆ ನಡೆಯಿತು.

ಆಂಜನೇಯರೆಡ್ಡಿ ಕುಟುಂಬದ ನಾಲ್ವರು ಪುರುಷರು, ನಾಲ್ವರು ಮಹಿಳೆಯರು ನೀರಿನ ಟ್ಯಾಂಕ್ ಏರಿ ಕುಳಿತರು. ಜೊತೆಯಲ್ಲಿ ಪೆಟ್ರೋಲ್ ತುಂಬಿದ ಕ್ಯಾನ್ ಸಹ ಕೊಂಡೊಯ್ದಿದ್ದರು.

ತಮ್ಮ 4 ಎಕರೆ 18 ಗುಂಟೆ ಜಮೀನು ವಿಚಾರದಲ್ಲಿ ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ಅವರು ಮೋಸ ಮಾಡಿದ್ದಾರೆಂದು ಆರೋಪಿಸಿದರು.

ADVERTISEMENT

'ನಮಗೆ ನ್ಯಾಯ ದೊರಕಿಸಿಕೊಡಿ, ಇಲ್ಲವೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ' ಎಂದು ನೀರಿನ ಟ್ಯಾಂಕ್ ಮೇಲಿಂದ ಬೆದರಿಕೆ ಒಡ್ಡಿದರು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಟ್ಯಾಂಕ್ ಮೇಲೆ ಕುಳಿತಿರುವವರನ್ನು ಕೇಳಕ್ಕೆ ಇಳಿಸಲು ಮನವೊಲಿಸುತ್ತಿದ್ದಾರೆ. ಆದರೆ ಕೋನಪ್ಪರೆಡ್ಡಿ ಅವರು ಸ್ಥಳಕ್ಕೆ ಬಂದು ನ್ಯಾಯ ಕಲ್ಪಿಸುವವರೆಗೂ ಕೆಳಗೆ ಇಳಿದು ಬರುವುದಿಲ್ಲ ಎಂದು ಹಟ ಹಿಡಿದು ಕುಳಿತಿದ್ದಾರೆ. ಪೊಲೀಸರು ಅವರ ಮನವೊಲಿಸಿಸುವ ಯತ್ನ ಮುಂದುವರೆಸಿದ್ದಾರೆ. ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.