
ದೊಡ್ಡಬಳ್ಳಾಪುರ: ತಾಲ್ಲೂಕಿನ ಮರಳೇನಹಳ್ಳಿಯಲ್ಲಿ ಗುರುವಾರ ಕುಟುಂಬವೊಂದರ ಕೌಟುಂಬಿಕ ಕಲಹದಲ್ಲಿ ತಂದೆಯೇ ಪುತ್ರನ ಮೇಲೆ ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದು, ಹರೀಶ್(28) ತಲೆ ಹಾಗೂ ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ.
ಆರೋಪಿ ಸುರೇಶ್‌ನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಗಾಯಾಳು ಹರೀಶ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುರೇಶ್ ಹಾಗೂ ಹರೀಶ್ ನಡುವೆ ಜಗಳವಾಗಿದ್ದು, ಗುರುವಾರ ರಾತ್ರಿ ಜಗಳ ತಾರರಕ್ಕೇರಿ ಸುರೇಶ್ ತನ್ನ ಮಗ ಹರೀಶ್ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಸದಾ ಜಗಳವಾಡುತ್ತಿದ್ದ ತಂದೆ-ಮಗ. ಜಗಳ ಬಿಡಿಸಲು ಹೋಗುವವರನ್ನು ಮನೆಯ ಬಳಿ ಯಾರೂ ಬರದಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಲ್ಲಿ ಬಳಸಿದ ಬಂದೂಕನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.