ADVERTISEMENT

ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸ್ಪಂದಿಸಿದ ದಾನಿಗಳು

​ಪ್ರಜಾವಾಣಿ ವಾರ್ತೆ
Published 7 ಮೇ 2020, 10:47 IST
Last Updated 7 ಮೇ 2020, 10:47 IST
ಆನೇಕಲ್ ತಾಲ್ಲೂಕಿನ ಅರೇಹಳ್ಳಿಯಲ್ಲಿ ಬಿಜೆಪಿ ಮುಖಂಡ ಬಳ್ಳೂರು ವಸಂತ್‌ರೆಡ್ಡಿ ಅವರು ನೀಡಿದ ಆಹಾರದ ಕಿಟ್‌ಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಾಪುರ ರಾಮಚಂದ್ರ ವಿತರಿಸಿದರು
ಆನೇಕಲ್ ತಾಲ್ಲೂಕಿನ ಅರೇಹಳ್ಳಿಯಲ್ಲಿ ಬಿಜೆಪಿ ಮುಖಂಡ ಬಳ್ಳೂರು ವಸಂತ್‌ರೆಡ್ಡಿ ಅವರು ನೀಡಿದ ಆಹಾರದ ಕಿಟ್‌ಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಾಪುರ ರಾಮಚಂದ್ರ ವಿತರಿಸಿದರು   

ಆನೇಕಲ್ : ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ರೈತರು, ಕೂಲಿ ಕಾರ್ಮಿಕರು, ದಿನಗೂಲಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ನೂರಾರು ಮಂದಿ ದಾನಿಗಳು ನೆರವಿಗೆ ಬಂದಿರುವುದು ಆಶಾದಾಯಕವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಾಪುರ ರಾಮಚಂದ್ರ ತಿಳಿಸಿದರು.

ಅವರು ತಾಲ್ಲೂಕಿನ ಬಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿಯಲ್ಲಿ ಬಿಜೆಪಿ ಮುಖಂಡ ಬಳ್ಳೂರು ವಸಂತ್‌ರೆಡ್ಡಿ ಅವರು ನೀಡಿದ ಆಹಾರದ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಬಳ್ಳೂರು ವಸಂತ್‌ ಮಾತನಾಡಿ, ಲಾಕ್‌ಡೌನ್‌ ಪ್ರಾರಂಭವಾದ ದಿನದಿಂದಲೂ ಪ್ರತಿದಿನ 1 ಸಾವಿರ ಮಂದಿಗೆ ಆಹಾರ ಪೂರೈಸಲಾಗುತ್ತಿತ್ತು. ನಂತರ ದಿನಗಳಲ್ಲಿ ಆಹಾರದ ಕಿಟ್‌ಗಳನ್ನು ಬಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿ, ದಾಸನಪುರ, ಭಕ್ತಿಪುರ, ಬಳ್ಳೂರು, ಹಾರೋಹಳ್ಳಿ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿಯ ಬಡವರು, ಮಧ್ಯಮ ವರ್ಗದವರು, ದಿನಗೂಲಿಗಳನ್ನು ಗುರುತಿಸಿ 1700 ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.

ADVERTISEMENT

ಬೊಮ್ಮಸಂದ್ರ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಪ್ರಸಾದ್‌, ಬಿಜೆಪಿ ಮಂಡಲ ಅಧ್ಯಕ್ಷ ದೊಡ್ಡಹಾಗಡೆ ಶಂಕರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ.ರಾಮಕೃಷ್ಣ, ಬಳ್ಳೂರು ಡೇರಿ ಅಧ್ಯಕ್ಷ ವೇಣು, ಮುಖಂಡರಾದ ಅರೇಹಳ್ಳಿ ಪ್ರಕಾಶ್‌, ರಾಜು, ಬಿ.ವಿ.ಆರ್‌.ಮಂಜುನಾಥ್‌, ಮುರಳಿ, ಪ್ರಶಾಂತ್‌, ನಿತೀಶ್, ಪ್ರಾಣೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.