ADVERTISEMENT

14 ಕೆಜಿ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 9:04 IST
Last Updated 5 ಸೆಪ್ಟೆಂಬರ್ 2020, 9:04 IST

ಹೊಸಕೋಟೆ: ಹೊಸಕೋಟೆ ಉಪವಿಭಾಗದ ಪೊಲೀಸರು ಇಲ್ಲಿಗೆ ಸಮೀಪದ 25 ಕಡೆ ದಾಳಿ ನಡೆಸಿ ಸುಮಾರು 14 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುವುದಾಗಿ ಡಿವೈಎಸ್ ಪಿ ನಿಂಗಪ್ಪ ಸಕ್ರಿ ತಿಳಿಸಿದ್ದಾರೆ.

‘ಶುಕ್ರವಾರ ಬೆಳಗ್ಗೆ ಉಪವಿಭಾಗದ ಎಲ್ಲಾ ಪೊಲೀಸ್ ಅಧಿಕಾರಿಗಳ ಹತ್ತು ತಂಡಗಳನ್ನು ರಚಿಸಿ ನಗರ ಹಾಗೂ ದಾಸರಹಳ್ಳಿಯ 25 ಸ್ಥಳಗಳಲ್ಲಿ ದಾಳಿ ನಡೆಸಲಾಯಿತು’ ಎಂದರು.

‘ನಗರದಲ್ಲಿ ಹತ್ತು ಕೆಜಿ ಹಾಗೂ ದಾಸರಹಳ್ಳಿಯಲ್ಲಿ ನಾಲ್ಕು ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.