ADVERTISEMENT

ಜೀವನದ ಯಶಸ್ಸಿಗೆ ಸದೃಢ ಆರೋಗ್ಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:41 IST
Last Updated 5 ಜುಲೈ 2022, 4:41 IST
ದೊಡ್ಡಬಳ್ಳಾಪುರದ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ನಡೆದ ಆರೋಗ್ಯ ಅರಿವು ಕಾರ್ಯಕ್ರಮವನ್ನು ಮಣಿಪಾಲ್ ಆಸ್ಪತ್ರೆಯ ಡಾ.ಅರವಿಂದ ಸತೀಶ್ ಉದ್ಘಾಟಿಸಿದರು
ದೊಡ್ಡಬಳ್ಳಾಪುರದ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ನಡೆದ ಆರೋಗ್ಯ ಅರಿವು ಕಾರ್ಯಕ್ರಮವನ್ನು ಮಣಿಪಾಲ್ ಆಸ್ಪತ್ರೆಯ ಡಾ.ಅರವಿಂದ ಸತೀಶ್ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ‘ಸೂಕ್ತ ಅರಿವು ಮತ್ತು ಮುಂಜಾಗ್ರತೆ ವಹಿಸುವುದರಿಂದ ಆರೋಗ್ಯ ಪಾಲನೆ ಸಾಧ್ಯ. ಕಲಬೆರಕೆ ಆಹಾರ, ತಾಪಮಾನದ ಏರಿಕೆ, ಆರೋಗ್ಯ ಪಾಲನೆಯ ನಿರ್ಲಕ್ಷ್ಯದಿಂದಯುವಜನತೆ ಸದೃಢ ಆರೋಗ್ಯವನ್ನು ಹೊಂದುವಲ್ಲಿ ವಿಫಲರಾಗುತ್ತಿದ್ದಾರೆ’ ಎಂದು ಮಣಿಪಾಲ್ ಆಸ್ಪತ್ರೆಯ ಡಾ.ಅರವಿಂದ ಸತೀಶ್ ಹೇಳಿದರು.

ನಗರದ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಮತ್ತು ದೊಡ್ಡಬಳ್ಳಾಪುರದ ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಆರೋಗ್ಯವು ಇತರೇ ಎಲ್ಲಾ ಭಾಗ್ಯಗಳ ಸಂಪಾದನೆಗೆ ಅಗತ್ಯವಾಗಿದೆ. ಹೀಗಾಗಿ, ಮಹಿಳೆಯರು ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಬೇಕು. ವಿದ್ಯಾರ್ಥಿನಿಯರು ಉತ್ತಮ ಶೈಕ್ಷಣಿಕ ಸಾಧನೆಗಾಗಿ ಆರೋಗ್ಯ ಸದೃಢವಾಗಿರುವಂತೆ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದರು.

ADVERTISEMENT

ದೇವರಾಜ ಅರಸ್ ಎಜುಕೇಷನಲ್ ಟ್ರಸ್ಟ್‌ ಉಪಾಧ್ಯಕ್ಷ ಜೆ. ರಾಜೇಂದ್ರ ಮಾತನಾಡಿ, ಯಶಸ್ಸಿಗೆ ಆರೋಗ್ಯ ಮುಖ್ಯ. ಮಹಿಳೆಯರು ಆರೋಗ್ಯವಾಗಿದ್ದರೆ ದೇಶ ಆರೋಗ್ಯವಾಗಿರುತ್ತದೆ ಎಂದು ತಿಳಿಸಿದರು.

ಸಮಾಜದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ದೇಶದಲ್ಲಿ ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ, ಸಂಸ್ಥೆಗಳ ಆರೋಗ್ಯದ ಕಡೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಿದೆ. ವಿದ್ಯಾರ್ಥಿನಿಯರು ಸಾಧ್ಯವಾದಷ್ಟು ಸಮಾಜಕ್ಕೆ ಒಳ್ಳೆಯದನ್ನು ಮಾಡಿ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ದೇವರಾಜ ಅರಸ್ ಎಜುಕೇಷನಲ್ ಟ್ರಸ್ಟಿನ ಎಚ್.ಆರ್. ವಿಭಾಗದ ವ್ಯವಸ್ಥಾಪಕ ಬಾಬುರೆಡ್ಡಿ, ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಿ.ಎಂ. ಸುರೇಂದ್ರ ರೆಡ್ಡಿ, ದೇವರಾಜ ಅರಸ್ ಪ್ರಥಮದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಚಿಕ್ಕಣ್ಣ , ಉಪ ಪ್ರಾಂಶುಪಾಲ ಕೆ. ದಕ್ಷಿಣಮೂರ್ತಿ, ಐಕ್ಯೂಎಸಿ ಸಂಯೋಜಕ ಆರ್. ಉಮೇಶ್, ಮಹಿಳಾ ವಿಭಾಗದ ಸಂಯೋಜಕಿ ಎನ್. ದಿವ್ಯಾ, ವಾಣಿಜ್ಯ ವಿಭಾಗದ ಮುಖ್ಯಸ್ಥ ಸಿ.ಪಿ. ಪ್ರಕಾಶ್, ಪ್ರಾಧ್ಯಾಪಕರಾದ ಪಿ. ಚೈತ್ರಾ, ಭವ್ಯಾ, ತಸ್ಮಿಯಾ, ಲಕ್ಷ್ಮೀಶ, ಕಲ್ಪನಾ ಶ್ರೀಧರ್, ಉಷಾಶ್ರೀ, ವ್ಯವಸ್ಥಾಪಕ ಬಿ. ಶ್ರೀನಿವಾಸ್, ಗ್ರಂಥಪಾಲಕಿ ಪ್ರೇಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.