ಜಿಬಿಎ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್‌ಗಳಿಗೆ ಮೀಸಲಾತಿ ಕರಡು ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ 63, ಬೆಂಗಳೂರು ಉತ್ತರ ನಗರ ಪಾಲಿಕೆಯ 72, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ 72, ಬೆಂಗಳೂರು ಪೂರ್ವ ನಗರ ಪಾಲಿಕೆಯ 50 ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ 112 ವಾರ್ಡ್‌ಗಳಿಗೆ ಮೀಸಲಾತಿ ಕರಡು ಮೀಸಲಾತಿಯನ್ನು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ನಂದಕುಮಾರ್ ಬಿ. ಪ್ರಕಟಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ ಅನುಸೂಚಿತ ಜಾತಿಗೆ 11, ಅನುಸೂಚಿತ ಪಂಗಡಕ್ಕೆ 1, ಹಿಂದುಳಿದ ‘ಎ’ ವರ್ಗಕ್ಕೆ 15, ಹಿಂದುಳಿದ ‘ಬಿ’ ವರ್ಗಕ್ಕೆ 4 ಹಾಗೂ ಸಾಮಾನ್ಯ ವರ್ಗಕ್ಕೆ 32 ವಾರ್ಡುಗಳನ್ನು ಮೀಸಲಿರಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಅನುಸೂಚಿತ ಜಾತಿಗೆ 9, ಅನುಸೂಚಿತ ಪಂಗಡಕ್ಕೆ 2, ಹಿಂದುಳಿದ ‘ಎ’ ವರ್ಗಕ್ಕೆ 19, ಹಿಂದುಳಿದ ‘ಬಿ’ ವರ್ಗಕ್ಕೆ 5 ಹಾಗೂ ಸಾಮಾನ್ಯ ವರ್ಗಕ್ಕೆ 37 ವಾರ್ಡುಗಳನ್ನು ಮೀಸಲಿರಿಸಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಅನುಸೂಚಿತ ಜಾತಿಗೆ 7, ಅನುಸೂಚಿತ ಪಂಗಡಕ್ಕೆ 3, ಹಿಂದುಳಿದ ‘ಎ’ ವರ್ಗಕ್ಕೆ 19, ಹಿಂದುಳಿದ ‘ಬಿ’ ವರ್ಗಕ್ಕೆ 5 ಹಾಗೂ ಸಾಮಾನ್ಯ ವರ್ಗಕ್ಕೆ 40 ವಾರ್ಡುಗಳನ್ನು ಮೀಸಲಿರಿಸಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಅನುಸೂಚಿತ ಜಾತಿಗೆ 7, ಅನುಸೂಚಿತ ಪಂಗಡಕ್ಕೆ 1, ಹಿಂದುಳಿದ ‘ಎ’ ವರ್ಗಕ್ಕೆ 14, ಹಿಂದುಳಿದ ‘ಬಿ’ ವರ್ಗಕ್ಕೆ 3 ಹಾಗೂ ಸಾಮಾನ್ಯ ವರ್ಗಕ್ಕೆ 25 ವಾರ್ಡುಗಳನ್ನು ಮೀಸಲಿರಿಸಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಅನುಸೂಚಿತ ಜಾತಿಗೆ 9, ಅನುಸೂಚಿತ ಪಂಗಡಕ್ಕೆ 2, ಹಿಂದುಳಿದ ‘ಎ’ ವರ್ಗಕ್ಕೆ 30, ಹಿಂದುಳಿದ ‘ಬಿ’ ವರ್ಗಕ್ಕೆ 7 ಹಾಗೂ ಸಾಮಾನ್ಯ ವರ್ಗಕ್ಕೆ 64 ವಾರ್ಡುಗಳನ್ನು ಮೀಸಲಿರಿಸಲಾಗಿದೆ.
ಜನವರಿ 23, 2006ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.