ADVERTISEMENT

ಮೂರ್ಚೆ ರೋಗಕ್ಕೆ ಮಾಟ ಮಂತ್ರದಿಂದ ಪರಿಹಾರ ಇಲ್ಲ: ಡಾ ಸತೀಶ್ ರುದ್ರಪ್ಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:33 IST
Last Updated 8 ಫೆಬ್ರುವರಿ 2026, 3:33 IST
ಮೂರ್ಛೆ ರೋಗಿಗಳನ್ನು ತಪಾಸಣೆ ಮಾಡುತ್ತಿರುವ ಸಂದರ್ಭ
ಮೂರ್ಛೆ ರೋಗಿಗಳನ್ನು ತಪಾಸಣೆ ಮಾಡುತ್ತಿರುವ ಸಂದರ್ಭ   

ಹೊಸಕೋಟೆ: ಮೂರ್ಛೆರೋಗಿಗಳು ಬುದ್ದಿಮಾಂದ್ಯರಲ್ಲ ಅವರ ಬಗ್ಗೆ ಕಾಳಜಿ, ಆರೈಕೆ ಹಾಗೂ ಸೂಕ್ತ ಚಿಕಿತ್ಸೆ ಕೊಡಿಸಿದರೆ ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡಬಹುದು ಎಂದು ಅಸ್ಟರ್ ವೈಟ್ ಪೀಲ್ಡ್ ಆಸ್ಪತ್ರೆಯ ಮುಖ್ಯ ವೈದ್ಯ ಡಾ ಸತೀಶ್ ರುದ್ರಪ್ಪ ಹೇಳಿದರು.

ನಗರದ ಜಿಕೆಬಿಎಂಎಸ್ ಶಾಲೆಯಲ್ಲಿ ರೋಟರಿ ಸೆಂಟ್ರಲ್, ಶ್ರೀನಿವಾಸ ನರ್ಸಿಂಗ್ ಹೋಮ್ ಹಾಗೂ ಆಸ್ಟರ್ ವೈಟ್ ಪೀಲ್ಡ್ ಆಸ್ಪತ್ರೆಯ ಸಹಯೋಗದಲ್ಲಿ ಮೂರ್ಚೆ ರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ರಕ್ತ ಸಂಚಾರಕ್ಕೆ ಅಡಚಣೆ ಉಂಟಾದಾಗ ಮೂರ್ಚೆ ರೋಗ ಬರುತ್ತದೆ. ಈ ಕಾಯಿಲೆಯನ್ನು ಯಾವುದೋ ಮಾಟ ಮಂತ್ರದಿಂದ ಗುಣಪಡಿಸಲು ಆಗದು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಶೇ 100 ರಷ್ಟು ಗುಣವಾಗುತ್ತದೆ ಎಂದರು.

ADVERTISEMENT

ಮೆದುಳಿನ ಶಸ್ತ್ರಚಿಕಿತ್ಸೆ ಎಂದು ಹೆದುರುವ ಅವಶ್ಯಕತೆ ಇಲ್ಲ.  ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನದಿಂದ ನೋವು ರಹಿತ ಚಿಕಿತ್ಸೆ ನೀಡಲಾಗುತ್ತದೆ ಅಸ್ಟರ್ ಆಸ್ಪತ್ರೆಯಲ್ಲಿ ಪ್ರತಿ ಶುಕ್ರವಾರ ಉಚಿತ ತಪಾಸಣೆ ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಶಿಬಿರದಲ್ಲಿ 130 ಕ್ಕೂ ಹೆಚ್ಚು ರೋಗಿಗಳಿಗೆ ತಪಾಸಣೆ ಮಾಡಲಾಯಿತು.

ರೋಟರಿಯಿಂದ ಚಿಕಿತ್ಸೆ ವೆಚ್ಚ: ರೋಟರಿ ಸೆಂಟ್ರಲ್ ಅಧ್ಯಕ್ಷ ಸುಬ್ರಮಣಿ, 21ನೇ ಶತಮನದಲ್ಲೂ ಮೂರ್ಚೆ ರೋಗ ಬಂದರೆ ವಾಸಿ ಆಗುವುದಿಲ್ಲ, ಮಾಟ ಮಂತ್ರಗಳಿಂದ ಮಾತ್ರ ಪರಿಹಾರ ಎಂಬ ಸಂಕುಚಿತ ಭಾವನೆ ಬಿಟ್ಟು, ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ಕೊಡಿಸಲು ಮುಂದೆ ಬನ್ನಿ ಅದಕ್ಕೆ ಆಗುವ ಸಂಪೂರ್ಣ ವೆಚ್ಚವನ್ನು ರೋಟರಿ ವಹಿಸಿಕೊಳ್ಳಲಿದೆ ಎಂದರು.

ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ ತಾಲೂಕು ಅಧ್ಯಕ್ಷ ಡಾ. ನಾಗರಾಜ್, ರೋಟರಿ ಹೊಸಕೋಟೆ ಹಾಗೂ ಕೋಲಾರ ವಲಯ ಮಾರ್ಗದರ್ಶಕ ಡಿ.ಎಸ್. ರಾಜ್ ಕುಮಾರ್, ಹಿರಿಯ ರೋಟರಿ ಸದಸ್ಯ ಡಾ.ನೂರ್ ಖಾನ್, ಕಾರ್ಯದರ್ಶಿ ಬಚ್ಚಣ್ಣ, ಆಸ್ಟರ್ ಆಸ್ಪತ್ರೆಯ ವೈದ್ಯರಾದ ಡಾ ಶಾರದ, ಡಾ.ಸೂರಜ್, ಡಾ.ಅಭಿಲಾಷ್, ಡಾ.ಸೌರವ್, ನಾಗೇಶ್ ಪ್ರಭಾ ಹಾಜರಿದ್ದರು.

  ನಗರದ ಜಿಕೆಬಿಎಂಎಸ್ ಶಾಲೆಯಲ್ಲಿ ರೋಟರಿ ಸೆಂಟ್ರಲ್ ಶ್ರೀನಿವಾಸ ಆಸ್ಪತ್ರೆ ಹಾಗೂ ಆಸ್ಟರ್ ವೈಟ್ ಪೀಲ್ಡ್ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂರ್ಚೆ ರೋಗ ತಪಾಸಣಾ ಶಿಬಿರದಲ್ಲಿ ಹಿರಿಯ ವೈದ್ಯ ಡಾ ಸತೀಶ್ ರುದ್ರಪ್ಪ ರೋಗಿಗಳ ತಪಾಸಣೆ ನೆಡೆಸಿದರು.
ಮೂರ್ಛೆ ರೋಗಿಗಳನ್ನು ತಪಾಸಣೆ ಮಾಡುತ್ತಿರುವುದು

ಮೂರ್ಛೆ ತಪಾಸಣೆ ಶಿಬಿರ ಕೇವಲ ಜನರಲ್ಲಿ ಅರಿವು ಮೂಡಿಸುದಷ್ಟೇ ಅಲ್ಲ ಕರ್ನಾಟಕವನ್ನು ಮೂರ್ಛೆ ಮುಕ್ತ ಗೊಳಿಸಲು ರೋಟರಿ ಸಂಸ್ಥೆಯು ರೋಬೋಟಿಕ್ ತಂತ್ರಜ್ಞಾನದಲ್ಲಿ ರೋಗಿಗೆ ಶಸ್ತ್ರ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಕೊಡಿಸುತ್ತದೆ ಶ್ರೀರಂಗ ಅಧ್ಯಕ್ಷ ಬೆಂಗಳೂರು ರೋಟರಿ ಐಟಿ ಸೆಲ್

ಕಾಯಿಲೆಗೆ ಕಾರಣ?

ಮೂರ್ಛೆ ರೋಗ ಸಾಮಾನ್ಯವಾಗಿ ನರ ದೌರ್ಬಲ್ಯದಿಂದ ಬರುತ್ತದೆ. ಜೊತೆಗೆ ಚಿಕ್ಕ ಮಕ್ಕಳಿಗೆ ಜ್ವರ ಬಂದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ಅಥಾವ ತಡವಾಗಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೆದುಳಿನಲ್ಲಿ ಯಾವುದೋ ನರದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಈ ರೋಗ ಬರುತ್ತದೆ. ದೇಶದಲ್ಲಿ ಇಂದಿಗೂ ಸುಮಾರು 10 ಲಕ್ಷ ಜನ ಈ ರೋಗದಿಂದ ಬಳಲುತಿದ್ದಾರೆ. ಮಾನಸಿಕ ಕಿನ್ನತೆ ಮೂಡನಂಭಿಕೆ ಮತ್ತಿತರ ಕಾರಣಗಳಿಂದ ಚಿಕಿತ್ಸೆ ಪಡೆಯುತ್ತಿಲ್ಲ. ಇದರಲ್ಲಿ ಮೂರ್ಛೆ ರೋಗ ಬಂದ ಶೇ 30 ರಷ್ಟು ರೋಗಿಗಳು ಚಿಕಿತ್ಸೆ ಪಡೆದರೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ವೈದ್ಯರಾದ ಡಾ.ರವೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.