ದೇವನಹಳ್ಳಿ: ಪಟ್ಟಣದ ಪ್ರಶಾಂತ ನಗರದಲ್ಲಿರುವ ಡಿಆರ್‌ಎನ್ ಬಡಾವಣೆಯಲ್ಲಿ ಗುರುವಾರ 50ನೇ ವರ್ಷದ ಗುರು ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಶಿರಡಿ ಸಾಯಿಬಾಬಾ, ಪುಟ್ಟಪರ್ತಿ ಸಾಯಿಬಾಬಾ, ಕೈವಾರ ತಾತಯ್ಯ, ರಮಣ ಮಹರ್ಷಿ, ದತ್ತಾತ್ರೇಯ, ಮಡಿಕೆ ಸ್ವಾಮಿಗಳ ಮೂರ್ತಿ ಹಾಗೂ ಭಾವಚಿತ್ರಗಳಿಗೆ ವಿವಿಧ ಪುಷ್ಟಗಳಿಂದ ಅಲಂಕರಿಸಲಾಗಿತ್ತು. ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಭಜನೆ, ಹಾಡುಗಳ ಮೂಲಕ ಭಕ್ತಿ ಸಾಗರದಲ್ಲಿ ಮಿಂದೆದ್ದರು.
ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಭಕ್ತರು ಗುರುಗಳ ದರ್ಶನ ಪಡೆದರು. ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿತ್ತು.
50 ವರ್ಷದ ಹಿಂದೆ ಹಿರಿಯರು ನಾಲ್ವರು ಭಕ್ತರೊಂದಿಗೆ ಬೆಂಗಳೂರಿನಲ್ಲಿ ಆರಂಭಿಸಿದ ಗುರು ಪೂರ್ಣಿಮೆ ಕಾರ್ಯಕ್ರಮ ಕೋವಿಡ್ ನಂತರ ನಾಲ್ಕು ವರ್ಷಗಳಿಂದ ಪಟ್ಟಣದ ಡಿಆರ್ಎನ್ ಬಡಾವಣೆಯಲ್ಲಿ ನಡೆಯುತ್ತಿದೆ ಎಂದು ಆಯೋಜಕ ಎನ್.ಸಾಯಿ ಕುಮಾರ್ ತಿಳಿಸಿದರು.
ಮುನಿರಾಜು, ಶ್ರೀನಿವಾಸ್, ಚಂದ್ರ ಶೇಖರ್, ಚಂದ್ರಶೇಖರ್, ಕೃಷ್ಣ, ಅಭಿಲಾಷ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.