ADVERTISEMENT

ಹೆಬ್ಬಗೋಡಿ ನಗರಸಭೆ ಅಧ್ಯಕ್ಷರಾಗಿ ನಂದಿನಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 2:32 IST
Last Updated 2 ನವೆಂಬರ್ 2020, 2:32 IST
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ವಿ. ನಂದಿನಿ ಮತ್ತು ಮುನಿಯಲ್ಲಪ್ಪ ಅವರನ್ನು ಮುಖಂಡರು ಅಭಿನಂದಿಸಿದರು
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ವಿ. ನಂದಿನಿ ಮತ್ತು ಮುನಿಯಲ್ಲಪ್ಪ ಅವರನ್ನು ಮುಖಂಡರು ಅಭಿನಂದಿಸಿದರು   

ಆನೇಕಲ್:ತಾಲ್ಲೂಕಿನ ಹೆಬ್ಬಗೋಡಿ ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ವಿ. ನಂದಿನಿ ಮತ್ತು ಉಪಾಧ್ಯಕ್ಷರಾಗಿ ಮುನಿಯಲ್ಲಪ್ಪ ಚುನಾಯಿತರಾಗಿದ್ದಾರೆ.

34 ಸದಸ್ಯ ಬಲದ ಹೆಬ್ಬಗೋಡಿ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. ತಲಾ 20 ಮತಗಳನ್ನು ಪಡೆಯುವ ಮೂಲಕ ನಂದಿನಿ ಮತ್ತು ಮುನಿಯಲ್ಲಪ್ಪ ಚುನಾಯಿತರಾದರು ಎಂದು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ತಿಳಿಸಿದರು.

ಹೆಬ್ಬಗೋಡಿಯು ಆನೇಕಲ್ ತಾಲ್ಲೂಕಿನ ಏಕೈಕ ನಗರಸಭೆಯಾಗಿದ್ದು, ಹಲವಾರು ಕೈಗಾರಿಕೆಗಳಿರುವ ಪ್ರದೇಶವಾಗಿದೆ. ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದುನೂತನ ಅಧ್ಯಕ್ಷೆ ನಂದಿನಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.