ADVERTISEMENT

ಹೇಮರಡ್ಡಿ ಮಲ್ಲಮ್ಮ ಸೇವೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 11 ಮೇ 2022, 3:46 IST
Last Updated 11 ಮೇ 2022, 3:46 IST
ದೇವನಹಳ್ಳಿ ತಾಲ್ಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು
ದೇವನಹಳ್ಳಿ ತಾಲ್ಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು   

ದೇವನಹಳ್ಳಿ: ಐನೂರು ವರ್ಷಗಳ ಹಿಂದೆ ಶ್ರೀಶೈಲದಲ್ಲಿ ಜೀವಿಸಿ ಶಿವಭಕ್ತೆಯಾಗಿದ್ದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಸಾಮಾಜಿಕ ಕಳಕಳಿಯ ಸ್ವರೂಪಿಯಾಗಿದ್ದು, ಮಹಿಳೆಯರು ಭಕ್ತಿಯಿಂದ ಮಹಾಶಿವನ ಆರಾಧನೆ ಮಾಡಬಹುದೆಂದು ಸಾರಿದ್ದಾರೆ ಎಂದು ತಹಶೀಲ್ದಾರ್‌ ಶಿವರಾಜ್‌ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ತಾಲ್ಲೂಕು ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

70ನೇ ಶತಮಾನದಲ್ಲಿ ಹೇಮರಡ್ಡಿ ಮಲ್ಲಮ್ಮ ಕುರಿತುಕಪ್ಪು–ಬಿಳುಪು ಕನ್ನಡ ಚಲನಚಿತ್ರ ನಿರ್ಮಿಸಲಾಗಿದೆ. ಅದನ್ನು ನೋಡಿ ಅವರ ದೈವಭಕ್ತಿ ಬಗ್ಗೆ ಸಾಕಷ್ಟು ಜನರಿಗೆ ತಿಳಿಯಿತು. ಸಂತ ಶಿಶುನಾಳ ಶರೀಫರು ಸಹ ಅವರ ಬಗ್ಗೆ ಅನೇಕ ತತ್ವಪದಗಳನ್ನು ರಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಮಹಿಳೆಯಾಗಿ ದೈವಭಕ್ತಿಯಿಂದ ಸಾಮಾಜಿಕ ಬದಲಾವಣೆಯ ಮಾರ್ಗದಲ್ಲಿ ಸೇವೆ ಹಾಗೂ ಸನ್ನಡತೆಯಿಂದ ದೇವರ ಕೃಪೆ ಪಾತ್ರವಾಗುವ ಕುರಿತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಿಳಿಸಿಕೊಟ್ಟರು. ಅವರ ತತ್ವ, ಸಿದ್ಧಾಂತ ಅನುಕರಣೀಯ ಎಂದು ಅಭಿಪ್ರಾಯ
ಪಟ್ಟರು.

ಜಿ.ಪಂ. ಮಾಜಿ ಸದಸ್ಯ ಬಾಲೇಪುರ ಲಕ್ಷ್ಮಿನಾರಾಯಣ್, ಹಕ್ಕುಬಾಧ್ಯತಾ ಶಿರಸ್ತೇದಾರ್ ಭರತ್, ಶಿರಸ್ತೇದಾರ್ ಶಶಿಕಲಾ, ಪ್ರಜಾವಿಮೋಚನಾ ಸ್ವಾಭಿಮಾನದ ಅಧ್ಯಕ್ಷ ಸೋಲೂರು ನಾಗರಾಜ್, ಮುಖಂಡ ನಾರಾಯಣಸ್ವಾಮಿ, ವಿಷಯ ನಿರ್ವಾಹಕ ಮಹೇಶ್, ಕಚೇರಿ ಸಿಬ್ಬಂದಿಯಾದ ಅಶ್ವಿನಿ, ಜಮುನಾ, ಕಾವ್ಯಾ, ಶ್ರುತಿ, ವರ್ಷಿಣಿ, ನಂದಿನಿ, ಗ್ರಾಮ ಸಹಾಯಕ ಉಮೇಶ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.