ADVERTISEMENT

ಹೊಸಕೋಟೆ: ಮಹಿಳೆಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 13:40 IST
Last Updated 3 ಜೂನ್ 2020, 13:40 IST

ಹೊಸಕೋಟೆ: ತಾಲ್ಲೂಕಿನ ಚಿಕ್ಕ ಕೊರಟಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ.

ಗರ್ಭಿಣಿಗೆ ಕೊರೊನಾ ಸೋಂಕು ಸಾಬೀತಾದ ಹಿನ್ನೆಲೆಯಲ್ಲಿಸಂಪರ್ಕದಲ್ಲಿದ್ದ ಗಂಡ, ಅತ್ತೆ, ಮಾವ ಇವರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ನಲ್ಲಿಟ್ಟಿತ್ತು. ಆದರೆ, ಇವರಲ್ಲಿ ಯಾವುದೇ ಸೋಂಕು ಲಕ್ಷಣ ಇರಲಿಲ್ಲ.

ಆದರೆ, ಶಾಸಕ ಶರತ್ ಬಚ್ಚೇಗೌಡ ಅವರು ಗ್ರಾಮದ 125 ಕುಟುಂಬಗಳ ರ್‍ಯಾಂಡಂ ಪರೀಕ್ಷೆ ಮಾಡುವುದಕ್ಕೆ ಆರೋಗ್ಯ ಇಲಾಖೆಗೆ ಸೂಚಿಸಿದ್ದರು. ಅದರಂತೆ ಪರೀಕ್ಷೆಗೊಳಪಡಿಸಿದಾಗ ಮಹಿಳೆಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಅವರನ್ನು ಹೆಚ್ಚಿನ‍ಪರೀಕ್ಷೆಗೆ ಒಳ‍ಪಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.