ADVERTISEMENT

ಹೊಸಕೋಟೆ ದ್ರೌಪದಮ್ಮ ಹೂವಿನ ಕರಗ

​ಪ್ರಜಾವಾಣಿ ವಾರ್ತೆ
Published 21 ಮೇ 2019, 13:51 IST
Last Updated 21 ಮೇ 2019, 13:51 IST
ಹೊಸಕೋಟೆ ದ್ರೌ‍ಪದಮ್ಮ ಕರಗ ಸಂಭ್ರಮದಿಂದ ನಡೆಯಿತು
ಹೊಸಕೋಟೆ ದ್ರೌ‍ಪದಮ್ಮ ಕರಗ ಸಂಭ್ರಮದಿಂದ ನಡೆಯಿತು   

ಹೊಸಕೋಟೆ: ಇತಿಹಾಸಿಕ ಹೊಸಕೋಟೆ ದ್ರೌಪದಮ್ಮ ಹೂವಿನ ಕರಗ ಅತ್ಯಂತ ವೈಭವದಿಂದ ನಡೆಯಿತು. ಕರಗದ ಪೂಜಾರಿ ಕಿರಣ್ ರಾತ್ರಿ 1ಕ್ಕೆ ದೇವಸ್ಥಾನದಿಂದ ಹೊರಟು ಊರಿನ ಎಲ್ಲಾ ಬೀದಿಗಳಲ್ಲಿ ಸಂಚರಿಸಿ ಪೂಜೆ ಸ್ವೀಕರಿಸಿದರು. ಬೆಳಿಗ್ಗೆ 10:30ಕ್ಕೆ ದೇವಸ್ಥಾನಕ್ಕೆ ಹಿಂತಿರುಗಿದರು.

ದಾರಿಯುದ್ದಕ್ಕೂ ನಾಗಸ್ವರ, ಟಮಟೆ, ಕರಗದ ಹಾಡುಗಳಿಗೆ ನೃತ್ಯ ಮಾಡುತ್ತ ನೆರದಿದ್ದ ಸಾವಿರಾರು ಭಕ್ತರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು. ಯಾವುದೇ ಜಾತಿ, ಮತ, ಪಂಗಡದ ಬೇಧವಿಲ್ಲದೆ ಎಲ್ಲರ ಮನೆ ಹತ್ತಿರ ಪೂಜೆ ಸ್ವೀಕರಿಸಿದರು.

ಮೊದಲ ಬಾರಿ ಕರಗ ಹೊತ್ತಿದ್ದ ಕಿರಣ್ ಯಶಸ್ವಿಯಾಗಿ ಧಾರ್ಮಿಕ ಕೆಲಸ ನಿರ್ವಹಿಸಿದರು. ಕರಗದ ಹಿನ್ನೆಲೆಯಲ್ಲಿ ನಗರ ವಿವಿಧೆಡೆ ದಾಸೋಹ ಏರ್ಪಡಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.