
ಚೊಕ್ಕಹಳ್ಳಿ(ಹೊಸಕೋಟೆ): ಹೊಸಕೋಟೆ ಮತ್ತು ಚಿಂತಾಮಣಿ ರಾಜ್ಯ ಹೆದ್ದಾರಿ–82ರ ಭಾರತ್ ಪೆಟ್ರೋಲಿಯಂ ಬಂಕ್ ಸಮೀಪ ಕಾರೊಂದು ಎರಡು ಬೈಕ್‌ಗೆ ಡಿಕ್ಕಿ ಹೊಡೆದು ಒಬ್ಬ ಸವಾರ ಮೃತಪಟ್ಟಿದ್ದು, ಮತ್ತೊಬ್ಬ ಬೈಕ್ ಸವಾರ, ಕಾರಿನಲ್ಲಿ ಇಬ್ಬರು ಸೇರಿ ಮೂವರು ಗಾಯಗೊಂಡಿದ್ದಾರೆ.
ಬಿಹಾರದ ಕೂಲಿ ಕಾರ್ಮಿಕ ಲಲ್ಲಮ್ ಕುಮಾರ್(21) ಮೃತ ಸವಾರ. ಮತ್ತೊಬ್ಬ ಬೈಕ್ ಸವಾರ ಹೊಸಕೋಟೆ ನಿವಾಸಿ ಸೋಮಶೇಖರ್, ಕಾರ್ ನಲ್ಲಿದ್ದ ಹಳೆ ಊರಿನ ಮುನಿರಾಜು, ಶಂಕರ್ ಗಾಯಗೊಂಡವರು. ಗಾಯಾಳುಗಳನ್ನು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಸಮೀಪದ ರಸ್ತೆಗೆ ಜಿಗಿದು ಎದುರಿನಿಂದ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಹೊಸಕೋಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.