ADVERTISEMENT

ಸಮಸ್ಯೆ ರಹಿತ ತಾಲ್ಲೂಕು ಗುರಿ: ಶಾಸಕ ಶರತ್‌

ಎರಡು ಸಾವಿರ ಮನೆ ನಿರ್ಮಾಣ ಮಂಜೂರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 15:44 IST
Last Updated 22 ಮಾರ್ಚ್ 2025, 15:44 IST
ಹೊಸಕೋಟೆ ತಾಲ್ಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಗ್ರಾಪಂ ವತಿಯಿಂದ ಅರ್ಹರಿಗೆ ಸವಲತ್ತುಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಣೆ ಮಾಡಿದರು.
ಹೊಸಕೋಟೆ ತಾಲ್ಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಗ್ರಾಪಂ ವತಿಯಿಂದ ಅರ್ಹರಿಗೆ ಸವಲತ್ತುಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಣೆ ಮಾಡಿದರು.   

ಹೊಸಕೋಟೆ: ‘ತಾಲ್ಲೂಕನ್ನು ಸಮಸ್ಯೆ ರಹಿತವಾಗಿ ರೂಪಿಸುವ ಸಲುವಾಗಿ ಹಲವು ಯೋಜನೆ ರೂಪಿಸಿದ್ದು, ಅದರಂತೆ ವಸತಿ ರಹಿತರಿಗೆ ವಿವಿಧ ವಸತಿ ಯೋಜನೆಗಳಲ್ಲಿ ಸುಮಾರು ಎರಡು ಸಾವಿರ ಮನೆಗಳನ್ನ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ತಾಲ್ಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ದಿ ಕಾಮಗಾರಿ ಚಾಲನೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಅಭಿವೃದ್ಧಿಯ ಮೂಲಕ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿರುವ ತಾವರೆಕೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಸಿಗಲಿದೆ. ಇದರಿಂದ ಈ ಭಾಗದ ಜನರನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ADVERTISEMENT

2024-25ನೇ ಸಾಲಿನಲ್ಲಿ ಈ ಗ್ರಾ.ಪಂ ವ್ಯಾಪ್ತಿಯಲ್ಲಿ ₹6 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. 15ನೇ ಹಣಕಾಸಿನಲ್ಲಿ ₹75 ಲಕ್ಷ ಕಾಮಗಾರಿ, ನರೇಗಾದಲ್ಲಿ ಮೂರು ಕೋಟಿ ವೆಚ್ಚದಲ್ಲಿ ಕೆಲಸ ಮಾಡಲಾಗಿದೆ. ಅಂಬೇಡ್ಕರ್ ವಸತಿ ನಿಗಮದಡಿ ₹76 ಲಕ್ಷ ವೆಚ್ಚದಲ್ಲಿ 40 ಮನೆ ನಿರ್ಮಾಣ ಮಾಡಲಾಗಿದೆ. ತಾವರೆಕೆರೆ ಶಾಲೆಯನ್ನು ವೋಲ್ವೊ ಕಂಪನಿ ದತ್ತು ಪಡೆದು ₹2 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.

ಬಿಎಆರ್‌ಡಿಎ ನಿದೇರ್ಶಕ ಎಚ್.ಎಂ.ಸುಬ್ಬರಾಜ್, ಉದ್ಯಮಿ ಬಿ.ವಿ.ಬೈರೇಗೌಡ, ತಾ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ, ಮಾಜಿ ತಾ.ಪಂ ಅಧ್ಯಕ್ಷ ಟಿಎಸ್‌ಆರ್ ರಾಜಶೇಖರ್, ಪಿಡಿಒ ಮುನಿಗಂಗಯ್ಯ ಉಪಸ್ಥಿತರಿದ್ದರು.

ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಿರುವ ಶಾಲಾ ಕಾಂಪೌAಡ್ ಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರು ಮತ್ತು ಗಣ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.