ADVERTISEMENT

ಹೊಸಕೋಟೆ: ಪರಮನಹಳ್ಳಿಯಲ್ಲಿ ಸಪ್ತಮಾತೆಯರ ದೇವರ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 2:29 IST
Last Updated 12 ಫೆಬ್ರುವರಿ 2026, 2:29 IST
ಪರಮನಹಳ್ಳಿ ಗ್ರಾಮದಲ್ಲಿ ಎಪಿಎಂಸಿ (ಬೆಂಗಳೂರು) ಮಾಜಿ ಅಧ್ಯಕ್ಷರಾದ ಪಿ.ಕೆ. ರಾಜಗೋಪಾಲ್ ಮತ್ತು ಕುಟುಂಬದವರು ನೂತನವಾಗಿ ನಿರ್ಮಿಸಿರುವ ಸಪ್ತಮಾತೆಯರ ದೇವಾಲಯದಲ್ಲಿ ದೇವರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು
ಪರಮನಹಳ್ಳಿ ಗ್ರಾಮದಲ್ಲಿ ಎಪಿಎಂಸಿ (ಬೆಂಗಳೂರು) ಮಾಜಿ ಅಧ್ಯಕ್ಷರಾದ ಪಿ.ಕೆ. ರಾಜಗೋಪಾಲ್ ಮತ್ತು ಕುಟುಂಬದವರು ನೂತನವಾಗಿ ನಿರ್ಮಿಸಿರುವ ಸಪ್ತಮಾತೆಯರ ದೇವಾಲಯದಲ್ಲಿ ದೇವರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು   

ಜಡಿಗೇನಹಳ್ಳಿ (ಹೊಸಕೋಟೆ): ಸನಾತನ ಧರ್ಮ, ಅಧ್ಯಾತ್ಮಿಕತೆ, ಪರಂಪರೆ, ದೇವಸ್ಥಾನ ಹಾಗೂ ಮಠ-ಮಂದಿರಗಳೇ ದೇಶದ ವೈಶಿಷ್ಟ್ಯತೆಗಳು. ಇವು ಭಾರತವನ್ನು ಜಗತ್ತಿನ ಮುಂದೆ ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸುವ ಶಕ್ತಿ ಸಾಮರ್ಥ್ಯ ಹೊಂದಿವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯ ಪರಮನಹಳ್ಳಿ ಗ್ರಾಮದಲ್ಲಿ ಸಪ್ತಮಾತೆಯರ ದೇವಾಲಯದಲ್ಲಿ ದೇವರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮಾರ್ಗವಾಗಿ ಹೊಸೂರು ರಸ್ತೆವರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸ್ಥಳದಲ್ಲಿ ದೇವಾಲಯ ನಿರ್ಮಿಸಿರುವುದು ಶ್ಲಾಘನೀಯ ಎಂದರು.

ADVERTISEMENT

ದೇವಾಲಯದ ನಿರ್ಮಾತೃ ಪಿ.ಕೆ. ರಾಜಗೋಪಾಲ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಂಗಳನಾಥ ಸ್ವಾಮೀಜಿ, ಎಚ್.ಸಿ. ತಮ್ಮೇಶ್ ಗೌಡ, ಸುರೇಶ್ ಕೆ.ಎಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.