
ಸೂಲಿಬೆಲೆ (ಹೊಸಕೋಟೆ): ತಾಲ್ಲೂಕಿಗೆ ಅನುದಾನ ತರಲು ಸದಾ ಸಿದ್ಧ. ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು. ಆಗ ಮಾತ್ರವೇ ತಾಲ್ಲೂಕಿನ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಆರ್‌ಡಿಪಿಆರ್ ಅನುದಾನದಡಿ ₹2 ಕೋಟಿ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಅಂಕೋನಹಳ್ಳಿ, ನಲ್ಲಗಾನಹಳ್ಳಿ, ಅರಸನಹಳ್ಳಿ, ಬೆಟ್ಟಹಳ್ಳಿ, ಗಿಡ್ಡಪ್ಪನಹಳ್ಳಿ, ವಳಗೆರೆಪುರ, ಸಾದಪ್ಪನಹಳ್ಳಿ, ಅತ್ತಿಬೆಲೆ, ಹಸಿಗಾಳ, ಸೊಣ್ಣಹಳ್ಳಿಪುರ, ತಿಮ್ಮಸಂದ್ರ ಗ್ರಾಮಗಳಲ್ಲಿ ತಲಾ ₹20 ಲಕ್ಷ ವೆಚ್ಚದ ಸಿ.ಸಿ ರಸ್ತೆ ಮತ್ತು ಮತ್ತಿತರ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಬಿ.ಎನ್.ಗೋಪಾಲಗೌಡ, ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ, ಎಂ.ಬಿ.ವೆಂಕಟೇಶ್, ನಾರಾಯಣಗೌಡ, ಅಕ್ಬರ್ ಅಲಿಖಾನ್, ಸುರೇಶ್, ಅತ್ತಿಬೆಲೆ ನಾಗೇಶ್, ಬಸವರಾಜ್, ಅರಸನಹಳ್ಳಿ ಶಿವಣ್ಣ, ಡಿ.ಸಿ ಲಕ್ಷ್ಮಿ, ಲಾರಿ ಕೃಷ್ಣಪ್ಪ, ಕೃಷ್ಣಪ್ಪ, ಸೋಮಶೇಖರ್, ಪಿಳ್ಳೆಗೌಡ, ಅಶ್ವಥ್, ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.