ADVERTISEMENT

ಹೊಸಕೋಟೆ: ಕಾಟಾಚಾರಕ್ಕೆ ತಾಲ್ಲೂಕು ಕ್ರೀಡಾಕೂಟ

ಅಸ್ವಸ್ಥರಾದ ಮಕ್ಕಳಿಗಿಲ್ಲ ಪ್ರಥಮ ಚಿಕಿತ್ಸೆ । ಕ್ರೀಡಾಪಟುಗಳಿಂದ ಟ್ರ್ಯಾಕ್‌ ಸಿದ್ಧ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 2:54 IST
Last Updated 21 ಸೆಪ್ಟೆಂಬರ್ 2025, 2:54 IST
ಹೊಸಕೋಟೆ ತಾಲ್ಲೂಕು ಕ್ರೀಡಾಕೂಟದಲ್ಲಿ ಕಬ್ಬಡಿ ಪಂದ್ಯಾವಳಿ
ಹೊಸಕೋಟೆ ತಾಲ್ಲೂಕು ಕ್ರೀಡಾಕೂಟದಲ್ಲಿ ಕಬ್ಬಡಿ ಪಂದ್ಯಾವಳಿ   

ಹೊಸಕೋಟೆ: ನಗರದ ಚೆನ್ನೆಬೈರೇಗೌಡ ಕ್ರೀಡಾಂಗಣದಲ್ಲಿ ಯಾವುದೇ ಸಿದ್ಧತೆ, ಸೌಲಭ್ಯ ಮತ್ತು ಪ್ರಥಮ ಚಿಕಿತ್ಸೆ ಇಲ್ಲದೆ ಕಾಟಾಚಾರಕ್ಕೆ ಎಂಬಂತೆ ತಾಲ್ಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತು.

ಕ್ರೀಡೆಗಳಿಗೆ ಮೈದಾನವನ್ನು ಸಿದ್ಧಪಡಿಸಿದ ಕಾರಣ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳೇ ಟ್ರ್ಯಾಕ್‌ ಅನ್ನು ಸಿದ್ಧ ಪಡಿಸಿಕೊಳ್ಳಬೇಕಾಯಿತು. ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಕ್ರೀಡಾಂಗಣ ಒದ್ದೆಯಾಗಿತ್ತು. ಅಲ್ಲಲ್ಲಿ ನೀರು ನಿಂತಿತ್ತು. ಆದರೂ ಕೆಸರುಮಯ ಮೈದಾನದಲ್ಲೇ ಕ್ರೀಡೆ ನಡೆಸಿದ್ದರಿಂದ ಕ್ರೀಡಾಪಟುಗಳು ಪರದಾಡುವಂತಾಯಿತು.

400 ಮೀ., 800 ಮೀ., 1,500 ಮೀ., ಓಟದಲ್ಲಿ ಅಸ್ವಸ್ಥರಾದ ಮಕ್ಕಳ ಆರೈಕೆಗೆ ಕನಿಷ್ಠ ಪ್ರಥಮ ಚಿಕಿತ್ಸೆಯೂ ಇಲ್ಲದೆ ಪರದಾಡಿದರು. ಆಯೋಜಕರು ಇದಕ್ಕೆ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ನಡೆದು ಕೊಂಡರು. ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರರು ಎಂದು ಪೋಷಕರು ಆಕ್ರೋಶಭರಿತರಾಗಿ ಪ್ರಶ್ನಿಸಿದರು.

ADVERTISEMENT

ಕುಡಿಯುವ ನೀರಿನ ವ್ಯವಸ್ಥೆಯನ್ನು ಕ್ರೀಡಾಂಗಣದಲ್ಲಿ ದ್ವಾರದಲ್ಲಿ ಮಾಡಲಾಗಿತು. ಕ್ರೀಡಾಪಟುಗಳು ಹಾಗೂ ಅಸ್ವಸ್ಥರಾದ ಮಕ್ಕಳಿಗೆ ನೀರು ತಂದು ಕೊಡುವವರು ಯಾರು ಇಲ್ಲ. 

ಕ್ರೀಡಾಕೂಟದ ಮೋದಲ ದಿನ ಕಬ್ಬಡಿ, ಥ್ರೋ ಬಾಲ್, ಕೊಕ್ಕೊ, ಕಬ್ಬಡಿ, ಗುಂಡು ಎಸೆತ, ಜಾವೆಲಿನ್ ಥ್ರೋ, ಲಾಂಗ್ ಜಂಪ್, ವಾಲಿಬಾಲ್, 200 ಮಿ., 400 ಮಿ., 1,500 ಮೀ., ಓಟ ಮೊದಲಾದ ಸ್ಪರ್ಧೆಗಳು ನಡೆದವು. ಕೊರತೆ ನಡುವೆಯೂ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿದರು.

ಅಸ್ವಸ್ಥಗೊಂಡ ವಿಧ್ಯಾರ್ಥಿಗೆ ಸಹಪಾಠಿಗಳ ಆರೈಕೆ
ಓಟದ ಸ್ಪರ್ಧೆಯಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಗೆ ಪ್ರಥಮ ಚಿಕಿತ್ಸೆ ನೀಡದ ಆಯೋಜಕರು
ಓಟದ ಸ್ಪರ್ಧೆಗೆ ಟ್ರ್ಯಾಕ್‌ ಸಿದ್ಧಪಡಿಸುತ್ತಿರುವ ಮಕ್ಕಳು
ಸರಿಯಾದ ತರಬೇತಿ ಮತ್ತು ಸೌಲಭ್ಯ ಸಿಕ್ಕರೆ ಖಂಡಿತ ರಾಷ್ಟಮಟ್ಟದ ಕ್ರೀಡೆಗಳಲ್ಲಿ ಭಾಗವಹಹಿಸುವ ಆಕಾಂಕ್ಷೆ ಇದೆ. ಆದರೆ ತಾಲ್ಲೂಕಿನಲ್ಲಿ ಸಮರ್ಪಕ ಟ್ರಾಕ್‌ ಆಗಲಿ ತರಬೇತಿ ನೀಡುವವರು ಇಲ್ಲ. ಇನ್ನೂ ಇಲ್ಲಿನ ಕ್ರೀಡಾಂಗಣದ ಟ್ರಾಕ್ ಓಟದ ಸ್ಪರ್ಧೆಗೆ ಸಮರ್ಪಕವಾಗಿಲ್ಲ.
ಶಿವರಾಂಜನ್, ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.