ADVERTISEMENT

ಹೊಸಕೋಟೆ: ರಸ್ತೆಯಂಚಿನ ಕಸಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 16:06 IST
Last Updated 12 ಮಾರ್ಚ್ 2025, 16:06 IST
ಹೊಸಕೋಟೆ ನಗರದಲ್ಲಿ ರಸ್ತೆ ಬದಿ ಕಸಕ್ಕೆ ಬೆಂಕಿ ಹಚ್ಚಿರುವುದು
ಹೊಸಕೋಟೆ ನಗರದಲ್ಲಿ ರಸ್ತೆ ಬದಿ ಕಸಕ್ಕೆ ಬೆಂಕಿ ಹಚ್ಚಿರುವುದು   

ಹೊಸಕೋಟೆ: ತಾಲ್ಲೂಕಿನಾದ್ಯಂತ  ರಸ್ತೆ ಬದಿ ಕಸ ಸುರಿಯಲಾಗುತ್ತಿದ್ದು, ಆ ಕಸಕ್ಕೆ ಬೆಂಕಿ ಹಚ್ಚಿ ತೊಂದರೆ ಕೊಡುವ ಪ್ರವೃತ್ತಿ ಹೆಚ್ಚಿದೆ.

ನಗರಸಭೆ ಕಸದ ಸಮಸ್ಯೆ ನಿಯಂತ್ರಿಸಲು ಹಲವು ಕ್ರಮ ಕೈಗೊಂಡಿದೆಯಾದರೂ ಸಿಸಿಟಿವಿ ಕ್ಯಾಮೆರಾ ಕಣ್ತಪ್ಪಿಸಿ ಕಸ ಸುರಿಯಲಾಗುತ್ತಿದೆ. ಆ ಕಸಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ವಾಯು ಮಾಲಿನ್ಯ ಆಗುತ್ತಿದೆ. ಇದರಿಂದ ಅಸ್ತಮಾ ಮತ್ತು ಶ್ವಾಸಕೋಸ ಸಂಬಂಧಿತ ಕಾಯಿಲೆ ಇರುವವರಿಗೆ ತೊಂದರೆಯಾಗುತ್ತಿದೆ. ಇನ್ನೂ ವಾಹನ ಸವಾರರಿಗೆ ರಸ್ತೆ ಕಾಣದ ಬಿದ್ದ ಗಾಯಗೊಂಡ ಉದಾಹರಣೆಗಳಿವೆ.

ಬೇಸಿಗೆ ಆರಂಭವಾಗಿದೆ. ಸುಡು ಬಿಸಿಲಿನಲ್ಲಿ ಬೆಂಕಿ ತಗಲಿದರೆ ಜ್ವಾಲ ಗಾಳಿಯಂತೆ ಹಬ್ಬುತ್ತಿದೆ. ಹೀಗಾದ್ದರೂ ಕಸದ ರಾಶಿಗೆ ಬೆಂಕಿ ಹಚ್ಚುವುದರಿಂದ ಸುತ್ತಮುತ್ತಲಿ ಪ್ರದೇಶಗಳಿಗೂ ಹಾನಿ ಉಂಟಾಗುತ್ತಿದೆ.

ADVERTISEMENT

ಈಚೆಗೆ ನಗರದ ಅಲ್ಪಸಂಖ್ಯಾತರ ಸ್ಮಶಾನದ ಪಕ್ಕದಲ್ಲಿ ಎಸೆದಿದ್ದ ಕಸದ ರಾಶಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಕಸದ ರಾಶಿಯ ಪಕ್ಕದಲ್ಲಿದ್ದ ಗಿಡಗಂಟಿಗಳಿಗೂ ವ್ಯಾಪಿಸಿ ಸುಟ್ಟಿತ್ತು. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು. ರಸ್ತೆಯಂಚಿನಲ್ಲಿ ಕಸ ಸುರಿಯದಂತೆ ಮತ್ತು ಬೆಂಕಿ ಹಚ್ಚದಂತೆ ನಗರಸಭೆ ಕ್ರಮವಹಿಸಬೇಕು. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.