ಹೊಸಕೋಟೆ: ತಾಲ್ಲೂಕಿನ ನಂದಗುಡಿ ಹೋಬಳಿಯ ಚೊಕ್ಕಸಂದ್ರ ಗ್ರಾಮದಲ್ಲಿ ಗಂಗಮ್ಮ ದೇವಿ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು.
ಶುಭ ಮಹೂರ್ತದಲ್ಲಿ ಅರ್ಚಕ ಮುನಿರಾಜು ನೇತೃತ್ವದಲ್ಲಿ ದೇವಿಗೆ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು.
ನೂರಾರು ಸುಮಂಗಲೆಯರು ಹೂಗಳಿಂದ ನಿರ್ಮಿಸಿದ್ದ ತಂಬಿಟ್ಟಿನ ದೀಪದ ಆರತಿಗಳನ್ನು ತಮಟೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಶ್ರೀಗಂಗಮ್ಮ ದೇವಿಗೆ ಅರತಿ ಬೆಳಗಿದರು.
ತೀರ್ಥ, ಪ್ರಸಾದ ವಿನಿಯೋಗದೊಂದಿಗೆ ಭಕ್ತರಿಗೂ ಭಕ್ಷ್ಯ ಭೋಜನ ಹಾಗೂ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.
ಹನುಮಪ್ಪ, ಅಂಜನ್ ಉಪ್ಪಿ, ಎಳನೀರು ಆಂಜಿನಪ್ಪ, ಶಂಕರಪ್ಪ, ರಾಮಕೃಷ್ಣಪ್ಪ, ಮುನಿರಾಜು, ರಮೇಶ್, ಮುನಯ್ಯ, ನಾಗರಾಜ್, ಸೋಮಣ್ಣ, ಅಮೃತ್, ನವೀನ್, ಗಗನ್, ಮೋನಿಷ್, ಆಟೊ ಶ್ರೀನಿವಾಸ್, ರಾಮಣ್ಣ, ಮುನೇಗೌಡ, ಕುಮಾರ್, ಚಂದ್ರಶೇಖರ, ಹಿಪ್ಪಿ ಮುನಿರಾಜು, ಗಂಗಾಧರ್, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.