ADVERTISEMENT

ಬೇಸಿಗೆ:ಮಹಡಿಯಲ್ಲಿ ಮಲಗಿದ್ದ ಕುಟುಂಬ- ಬಾಗಿಲು ಮರಿದು10 ಲಕ್ಷ ಮೌಲ್ಯದ ಚಿನ್ನ ಲೂಟಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 7:10 IST
Last Updated 31 ಮಾರ್ಚ್ 2023, 7:10 IST
   

ವಿಜಯಪುರ(ದೇವನಹಳ್ಳಿ): ಪಟ್ಟಣದ 9ನೇ ವಾರ್ಡ್ ನಿವಾಸಿ ಸೀನಪ್ಪ ಎಂಬುವವರ ಮನೆಯಲ್ಲಿ ಶುಕ್ರವಾರ ₹10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹35 ಸಾವಿರ ನಗದು ಕಳ್ಳತನವಾಗಿದೆ.

ಬೇಸಿಗೆಯ ಕಾರಣ ಕೆಳಗಿನ ಮನೆಗೆ ಬೀಗ ಹಾಕಿ, ಮಹಡಿ ಮನೆಯಲ್ಲಿ ಸೀನಪ್ಪ ಕುಟುಂಬ ಮಲಗಿತ್ತು. ಇದೇ ಸಮಯದಲ್ಲಿ ಕಳ್ಳರು
ಮನೆ ಬಾಗಿಲು ಮುರಿದು ಕೋಣೆಯಲ್ಲಿದ್ದ ಬೀರುವಿನ ಬಾಗಿಲು ಹೊಡೆದು ಹಾಕಿ, ಲಾಂಗ ಚೈನ್, ನೆಕ್ಲೆಸ್, ವಾಲೆ ಜುಮುಕಿ, ವಾಲೆ ಸೆಟ್, ಕತ್ತಿನ ಚೈನ್, ಬ್ರಾಸ್ಲೈಟ್, ತಾಳಿ, ಗುಂಡು ಸೇರಿದಂತೆ ₹35 ಸಾವಿರ ನಗದು ದೋಚಿಕೊಂಡು ಹೋಗಿದ್ದಾರೆ.

ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಕೆಳಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಯಿತು ಎಂದು ಸೀನಪ್ಪ ಅವರ ಪುತ್ರ ನಾಗರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪಟ್ಟಣದ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಸರ್ಕಲ್ ಇನ್ ಸ್ಪೆಕ್ಟರ್ ಎಂ.ಎಸ್.ರವಿ, ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.