ADVERTISEMENT

ಮನೆಗಳ್ಳರ ಬಂಧನ, 634 ಗ್ರಾಂ ಚಿನ್ನಾಭರಣ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 13:50 IST
Last Updated 2 ಮೇ 2019, 13:50 IST
ಕಳ್ಳರಿಂದ ವಶಪಡಿಸಿಕೊಂಡಿರುವ ಚಿನ್ನಾಭರಣಗಳೊಂದಿಗೆ ಡಿವೈಎಸ್‌ಪಿ ಆರ್‌.ಮೋಹನ್‌ಕುಮಾರ್‌ ಹಾಗೂ ಸಿಬ್ಬಂದಿ
ಕಳ್ಳರಿಂದ ವಶಪಡಿಸಿಕೊಂಡಿರುವ ಚಿನ್ನಾಭರಣಗಳೊಂದಿಗೆ ಡಿವೈಎಸ್‌ಪಿ ಆರ್‌.ಮೋಹನ್‌ಕುಮಾರ್‌ ಹಾಗೂ ಸಿಬ್ಬಂದಿ   

ದೊಡ್ಡಬಳ್ಳಾಪುರ: ನಗರ ಠಾಣೆ ಪೊಲೀಸರು ಪತ್ತೆ ಹಚ್ಚಲು ಹೋಗಿದ್ದೇ ಒಂದು ಪ್ರಕರಣವಾದರೆ, ಕೈಗೆ ಸಿಕ್ಕಿದ್ದೇ ಮತ್ತೋಂದು.

ಹೌದು ಡಿವೈಎಸ್‌ಪಿ ಆರ್‌. ಮೋಹನ್‌ಕುಮಾರ್‌ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಏ 20 ರಂದು ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಬಾಲಾಜಿ ಲೇಔಟ್‌ನಲ್ಲಿ ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಮುತ್ತೂರು ನಿವಾಸಿ ಕೆಂಚಪ್ಪ ಅಲಿಯಾಸ್ ಕೆಂಚ (32) ಎಂಬಾತನನ್ನು ಠಾಣೆಗೆ ಕರೆದು ವಿಚಾರಣೆಗೆ ಒಳಪಡಿಸಲಾಗಿತ್ತು.ಈತ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿ ನಿಖಿಲ್‌ ಎಂಬಾತನನ್ನು ಬಂಧಿಸಲಾಗಿದೆ.

ಆಗ ಈತ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಟೆಲಿಕಾಂ ಲೇಔಟ್‌ನ ಮನೆಯೊಂದರಲ್ಲಿ ಏ.6 ರಂದು ಕಳವು ಮಾಡಿದ್ದ ಸುಮಾರು 634 ಗ್ರಾಂ ಚಿನ್ನಾಭರಣಗಳ ಬಗ್ಗೆ ಮಾಹಿತಿ ನೀಡಿದ್ದ.

ADVERTISEMENT

2018ರಲ್ಲಿ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮತ್ತು ಮೋಟಾರ್ ಸೈಕಲ್ ಗಳನ್ನು ಕಳ್ಳತನ ಮಾಡಿದ್ದ ಕೆಂಚಪ್ಪ ಹಾಗೂ ಈತನ ಜೊತೆಯಲ್ಲಿದ್ದ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಕೊಲೆ ಪ್ರಕರಣದ ಆರೋಪಿ ನಿಖಿಲ್(24) ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.

ಆಗ ಕುಖ್ಯಾತ ಮನೆಗಳ್ಳ ಮಂಜುನಾಥ್ ಅಲಿಯಾಸ್ ಮಂಜ ಅಲಿಯಾಸ ಕೊಮ್ಮಘಟ್ಟ ಮಂಜನ ಜೊತೆಗೂಡಿ ಟೆಲಿಕಾಂ ಲೇಔಟ್‌ನಲ್ಲಿ 634 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಅಡವಿಟ್ಟಿದ್ದ ಆಭರಣಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ್ ಸೆಪಟ್, ಹೆಚ್ಚವರಿ ವರಿಷ್ಠಾಧಿಕಾರಿ ವಿ.ಕೆ. ಸಜಿತ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ ಜಿ.ಸಿದ್ದರಾಜು, ನಗರ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಕೆ. ವೆಂಕಟೇಶ್ ಕಾರ್ಯಾಚರಣೆ ನಡೆಸಿ ಬಂಧಿತರು ಅಡವಿಟ್ಟಿದ್ದ ಅಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಪೊಲೀಸರ ಕಾರ್ಯವನ್ನು ಶ್ಲಾಘಿಸಿ ಬೆಂಗಳೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸ್‌ ಸಿಬ್ಬಂದಿಗೆ ಬಹುಮಾನ ಘೊಷಿಸಿದ್ದಾರೆ. ನಗರದ ಬಾಲಾಜಿ ಲೇಔಟ್‌ನಲ್ಲಿ ನಡೆದಿರುವ ಕಳ್ಳತನ ಪ್ರಕರಣ ಇನ್ನು ಪತ್ತೆಯಾಗಿಲ್ಲ.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಪೊಲೀಸ್‌ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಎಂ. ಬಾಲಾಜಿ, ಅಪರಾಧ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ರಂಗನಾಥ್ ಪೊಲೀಸ್‌ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.