ADVERTISEMENT

ದೇವನಹಳ್ಳಿ | ವಿಜಯಪುರ: ನಾಡಕಚೇರಿಯಲ್ಲಿ ಪಾರದರ್ಶಕ ಕೆಲಸ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 2:00 IST
Last Updated 16 ಆಗಸ್ಟ್ 2025, 2:00 IST
ವಿಜಯಪುರ ನಾಡಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು
ವಿಜಯಪುರ ನಾಡಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು   

ವಿಜಯಪುರ (ದೇವನಹಳ್ಳಿ): ಇಲ್ಲಿನ ನಾಡಕಚೇರಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ರಾಜಸ್ವ ನಿರೀಕ್ಷಕ ಸುದೀಪ್ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಸರ್ಕಾರವು ಸಾರ್ವಜನಿಕರ ಅನುಕೂಲಕ್ಕಾಗಿ ತಂದಿರುವ ಮಾಹಿತಿ ಹಕ್ಕು, ಮತ್ತಿತರ ಯೋಜನೆಗಳು ನಾಡಕಚೇರಿಯಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತೆ ಮಾಡಿದ್ದು, ಸಂಧ್ಯಾ ಸುರಕ್ಷ, ಅಂಗವಿಕಲ, ವಿಧವಾ ವೇತನ ಸೇರಿದಂತೆ ಅನೇಕ ಯೋಜನೆಗಳು ಅರ್ಹಫಲಾನುಭವಿಗಳ ಮನೆಗೆ ತಲುಪಿಸುವಂತಹ ಕಾರ್ಯ ಸಿಬ್ಬಂದಿ ವರ್ಗದಿಂದ ಆಗುತ್ತಿದೆ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಇವರ ಸ್ಮರಣೆಯಿಂದ ಯುವಜನಾಂಗದಲ್ಲಿ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದರು.

ಗ್ರಾಮ ಆಡಳಿತಾಧಿಕಾರಿ ರವಿಕುಮಾರ್, ಮಾಲಾ, ಮಹಬೂಬ್ ಅಲಗೂರ್, ಮುನಿರಾಜು, ಗ್ರಾಮ ಸಹಾಯಕರಾದ ಸತೀಶ್, ಕೆ.ನರಸಿಂಹಮೂರ್ತಿ, ಮುಕ್ತಾ, ಚೈತ್ರಾ, ಶ್ರೀರಾಮ, ಚಲಪತಿ, ನೆಮ್ಮದಿ ಕೇಂದ್ರದ ರವಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.