ADVERTISEMENT

ಚಂದಾಪುರ: ಸಮಗ್ರ ಕೀಟ ನಿರ್ವಹಣೆ ತರಬೇತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:36 IST
Last Updated 22 ಜನವರಿ 2026, 4:36 IST
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಸಿಂಜೆಂಟ್ ಕಂಪನಿಯಿಂದ ಸಂರಕ್ಷಿತ ಕೃಷಿಯಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಸಿಂಜೆಂಟ್ ಕಂಪನಿಯಿಂದ ಸಂರಕ್ಷಿತ ಕೃಷಿಯಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು   

ಚಂದಾಪುರ(ಆನೇಕಲ್):  ಪಟ್ಟಣದಲ್ಲಿ ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಸಿಂಜೆಂಟ್‌ ಕಂಪನಿಯಿಂದ ಸಂರಕ್ಷಿತ ಕೃಷಿಯಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರ ಮಂಗಳವಾರ ನಡೆಯಿತು. ವಿವಿಧ ಗ್ರಾಮಗಳ ತೋಟಗಾರಿಕೆ ಬೆಳೆಗಾರರು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.

ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಉಪನ್ಯಾಸಕ ಡಾ.ಜಹೀರ್‌ ಬಾ‍ಷಾ ಮಾತನಾಡಿ, ಔಷಧಿ ಕುಡಿಯುವುದು ಮನುಷ್ಯರಿಗೆ ಎಷ್ಟು ಕಷ್ಟವೋ ಅಷ್ಟೇ ಕಷ್ಟ ಗಿಡಗಳಿಗೂ ಆಗುತ್ತದೆ. ಹಾಗಾಗಿ ಔಷಧಿ ನೀಡುವ ಮುನ್ನ ರೋಗ ಗುರುತಿಸುವುದು ಅತ್ಯಂತ ಮುಖ್ಯ. ಸರಿಯಾದ ರೋಗಕ್ಕೆ ಸರಿಯಾದ ಔಷಧ ನೀಡುವುದರಿಂದ ತ್ವರಿತಗತಿಯಲ್ಲಿ ರೋಗ ವಾಸಿಯಾಗುತ್ತದೆ. ರೋಗದ ಉಲ್ಭಣ ಹೆಚ್ಚಾಗದಂತೆ ಕ್ರಮ ವಹಿಸಲು ರೈತರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ರೈತರು ಸಹ ಸಂಶೋಧನೆಗಳತ್ತ ಗಮನ ವಹಿಸಬೇಕು. ನವೀನ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಮಣ್ಣಿನ ಸತ್ವ ಅರಿತು ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಗುಲಾಬಿ ಗಿಡಕ್ಕೆ ಕಪ್ಪುಚುಕ್ಕೆ, ಬೂದಿ ರೋಗ, ಫಂಗಲ್‌ ಕಾಯಿಲೆ, ಶೀಲೀಂಧ್ರದಿಂದ ಬರುವ ಸೋಂಕು ಸೇರಿದಂತೆ ವಿವಿಧ ರೋಗಗಳು ಬರುತ್ತವೆ. ಈ ಸಂದರ್ಭದಲ್ಲಿ ರೈತರು ಧೃತಿಗೇಡದೇ ಸೂಕ್ತ ಔಷಧಿ ನೀಡಬೇಕು. ರೈತರು ತಮ್ಮ ಗಿಡಗಳಿಗೆ ರೋಗ ಬರುವ ಮುಂಚೆಯೇ ಮುಂಜಾಗೃತೆ ಕ್ರಮಗಳನ್ನು ವಹಿಸಬೇಕು. ಔಷಧಿಗಳನ್ನು ಸಿಂಪಡಿಸಬೇಕು ಎಂದರು.

ತೋಟಗಾರಿಕೆ ರೈತರಿಗೆ ನವೀನ ಚಿಂತನೆಗಳ ಬಗ್ಗೆ ಮಾಹಿತಿ ನೀಡಲು ಕಾರ್ಯಾಗಾರ ಆಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ ಹೂವು ಹಾವಳಿಯಿಂದ ಹೂ ಬೆಳೆಗಾರರಿಗೆ ನಷ್ಟವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಪ್ಲಾಸ್ಟಿಕ್‌ ಹೂವುಗಳನ್ನು ಬಳಸದೇ ನೈಸರ್ಗಿಕ ಹೂವುಗಳ ಬಳಸಬೇಕು ಎಂದು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಣ್ಣ ಸಲಹೆ ನೀಡಿದರು.

ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಮುರಳಿ ಮೋಹನ್‌, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗೀತಾ, ಸಿಂಜೆಂಟ್‌ ಕಂಪನಿಯ ಅನಿಲ್‌ ಶಾಸ್ತ್ರೀ, ಪ್ರವೀಣ್‌ ಕುಮಾರ್, ಶಿವಾನಂದ ಹಿರೇಮಠ, ಸುರೇಶ್, ವಾಹೀದ್‌, ಹಸಿರು ಮನೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಲೋಕೇಶ್‌, ಪದಾಧಿಕಾರಿಗಳಾದ ಮಧು, ಮಂಜುನಾಥ್‌, ಅಶೋಕ್‌, ವೆಂಕಟೇಶ್‌, ರಾಮಕೃಷ್ಣಪ್ಪ, ಮೋಹನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.