ADVERTISEMENT

ಮೂರು ಜಿಲ್ಲೆಯಲ್ಲಿ ಇಸ್ರೇಲ್ ಮೀರಿಸುವ ಕೃಷಿ: ಜಿಕೆವಿಕೆ ಸಂಶೋದನಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:20 IST
Last Updated 9 ಅಕ್ಟೋಬರ್ 2025, 2:20 IST
ಸೂಲಿಬೆಲೆ ಹೋಬಳಿ ತಿಮ್ಮಸಂದ್ರ ಗ್ರಾಮದಲ್ಲಿ ಜಿಕೆವಿಕೆ ವತಿಯಿಂದ ನೆಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ್ ಕೈಪಿಡಿ ಬಿಡುಗಡೆ ಮಾಡಿದರು 
ಸೂಲಿಬೆಲೆ ಹೋಬಳಿ ತಿಮ್ಮಸಂದ್ರ ಗ್ರಾಮದಲ್ಲಿ ಜಿಕೆವಿಕೆ ವತಿಯಿಂದ ನೆಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ್ ಕೈಪಿಡಿ ಬಿಡುಗಡೆ ಮಾಡಿದರು    

ಸೂಲಿಬೆಲೆ (ಹೊಸಕೋಟೆ): ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಸ್ರೇಲ್ ಕೃಷಿ ಮಾದರಿ  ಮೀರಿಸುವ ಕೃಷಿ ಪದ್ದತಿಗಳು ಜಾರಿಯಲ್ಲಿವೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ್ ಹೇಳಿದರು.

ಹೋಬಳಿ ತಿಮ್ಮಸಂದ್ರ ಗ್ರಾಮದಲ್ಲಿ ಬುಧವಾರ ಕೃಷಿ ಕ್ಷೇತ್ರ ಫಲೋತ್ಸವದಲ್ಲಿ ಮಾತನಾಡಿದ ಅವರು, ದೇಶದ ಕೃಷಿ ಕ್ಷೇತ್ರದಲ್ಲಿ ಹೊಸ  ತಂತ್ರಜ್ಞಾನಗಳ ಅಳವಡಿಕೆ ಅಗತ್ಯವಿದೆ ಎಂದರು. 

ಕೃಷಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಇಸ್ರೇಲ್ ದೇಶಕ್ಕೆ ಹೋಗುವ ಅಗತ್ಯವಿಲ್ಲ. ಕೋಲಾರ, ಚಿಕ್ಕಬಳ್ಳಾಪುರ  ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರ ಭೇಟಿ ಮಾಡಿ ಅನುಭವ ಹಂಚಿಕೊಂಡರೆ ಸಾಕು. ಇಸ್ರೇಲ್ ಮಾದರಿ ಮೀರಿಸುವ ವ್ಯವಸಾಯ ಪದ್ದತಿ ಕಲಿಯಬಹುದು ಎಂದರು.

ADVERTISEMENT

ಗ್ರಾಮೀಣ ಭಾಗದಲ್ಲಿ ರೇಷ್ಮೆ ಮತ್ತು ಕೃಷಿ ಜೊತೆ ಪಶುಸಂಗೋಪನೆ ಲಾಭದಾಯಕವಾಗಿದ್ದು, ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆಯ ಅವಶ್ಯಕತೆಯಿದೆ ಎಂದು ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಅಭಿಪ್ರಾಯಪಟ್ಟರು.

ನೂತನ ಕೃಷಿ ತಂತ್ರಜ್ಞಾನದತ್ತ ಯುವ ಸಮೂಹ ಮುಂದಾಗಿ ಗ್ರಾಮೀಣ ಪ್ರದೇಶದತ್ತ ಹೆಚ್ಚಿನ ಗಮನಹರಿಸಬೇಕು ಮತ್ತು ರೈತರೊಟ್ಟಿಗೆ ಕೆಲಸಮಾಡಬೇಕು. ಆಗ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ ಎಂದು ಹಾಪ್‌ಕಾಮ್ಸ್ ನಿರ್ದೇಶಕ ಎಂ.ಬಿ.ವೆಂಕಟೇಶ್ ಸಲಹೆ ನೀಡಿದರು.

ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ, ನಾರಾಯಣಗೌಡ, ತಾ.ಪಂ.ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಹೊಸಕೋಟೆ ಡೇರಿ ಉಪ ವ್ಯವಸ್ಥಾಪಕ ಶ್ರೀರಾಮ್, ಗ್ರಾ.ಪಂ.ಅಧ್ಯಕ್ಷೆ ಪದ್ಮಾವತಿ, ಮಾಜಿ ಅಧ್ಯಕ್ಷ ಬೈರೇಗೌಡ, ಭಾರತಿ ದೇವರಾಜ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಹಸಿಗಾಳ ಪಿಳ್ಳೇಗೌಡ, ಸೋಮಶೇಖರ್, ತಾ.ಪಂ.ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ವಿಜಯಕುಮಾರ್, ಬೈರೇಗೌಡ, ಜಿಕೆವಿಕೆ ಪ್ರಾಧ್ಯಾಪಕ ಡಾ.ಪಂಕಜಾ, ಕೃಷಿ ವಿಜ್ಞಾನಿ ಹನುಮಂತರಾಯಪ್ಪ, ರವೀಶ್ ಇತರರು ಇದ್ದರು.

ತಿಮ್ಮಸಂದ್ರದಲ್ಲಿ ಮೂರು ತಿಂಗಳ ಕೃಷಿ ಅನುಭವ

ಕೃಷಿ ವಿಜ್ಞಾನ ಕೇಂದ್ರ ಹಾಡೋನಹಳ್ಳಿ ಲಕ್ಕೊಂಡಹಳ್ಳಿ ಗ್ರಾಮ ಪಂಚಾಯತಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕೃಷಿತೋಟಗಾರಿಕೆ ರೇಷ್ಮೆ ಮೀನುಗಾರಿಕೆ ಪಶುಸಂಗೋಪನೆ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಂತಿಮ ವರ್ಷದ ಕೃಷಿ ಕೃಷಿ ವ್ಯವಹಾರ ನಿರ್ವಹಣೆ ಆಹಾರ ಪೋಷಣೆ ಆಹಾರ ಪದ್ದತಿ ಕೃಷಿ ಇಂಜನಿಯರಿಂಗ್ ವಿದ್ಯಾರ್ಥಿಗಳು ತಿಮ್ಮಸಂದ್ರ ಗ್ರಾಮದಲ್ಲಿ ಸುಮಾರು 90 ದಿನ ಗ್ರಾಮೀಣ ಕೃಷಿ ಕ್ಷೇತ್ರದಲ್ಲಿ ವಿವಿಧ ಪ್ರಯೋಗ ಮಾಡಿ  ರೈತರಿಗೂ ಕಲಿಕೆಗೆ ವೇದಿಕೆ ಕಲ್ಪಿಸಿಕೊಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.