ADVERTISEMENT

ಜಕಣಾಚಾರಿ ಪ್ರತಿಮೆ ನಿರ್ಮಾಣಕ್ಕೆ ಜಾಗ ಕೊಡಿ: ಸುರೇಶಚಾರ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 4:49 IST
Last Updated 2 ಜನವರಿ 2026, 4:49 IST
ಹೊಸಕೋಟೆ ತಾಲ್ಲೂಕು ಕಾರ್ಯಾಲಯದಲ್ಲಿ ತಾಲ್ಲೂಕು ವಿಶ್ವ ಕರ್ಮ ಸಂಘದಿಂದ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು
ಹೊಸಕೋಟೆ ತಾಲ್ಲೂಕು ಕಾರ್ಯಾಲಯದಲ್ಲಿ ತಾಲ್ಲೂಕು ವಿಶ್ವ ಕರ್ಮ ಸಂಘದಿಂದ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು   

ಹೊಸಕೋಟೆ: ನಗರದ ತಾಲ್ಲೂಕು ಕಾರ್ಯಾಲಯದ ಆವರಣದಲ್ಲಿ ತಾಲ್ಲೂಕು ವಿಶ್ವ ಕರ್ಮ ಸಂಘದಿಂದ ಸರಳವಾಗಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚಾರಣೆ ನಡೆಯಿತು.

ಅಮರಶಿಲ್ಪಿ ಜಕಣಾಚಾರಿ ಸಾಧನೆಯನ್ನು ಜಗ್ಗತ್ತಿನ ಯಾವೊಬ್ಬ ಶಿಲ್ಪಿಯು ಮಾಡಿರಲಾರ ಎಂಬುದನ್ನು ಬೇಲೂರು ಹಳೆಬಿಡಿನ ಹೊಯ್ಸಳ ದೇವಾಲಯಗಳನ್ನು ನೋಡಿದ ಯಾರು ಬೇಕದರೂ ಹೇಳಬಹುದು. ಅಂತಹ ಮಹಾನ್ ಸಾಧಕನಿಗೆ ಇಂದು ತಾಲ್ಲೂಕಿನಲ್ಲಿ ಒಂದು ಜಾಗವಿಲ್ಲ. ಜಕಣಾಚಾರಿ ಪ್ರತಿಮೆ ಸ್ಥಾಪನೆಗೆ ತಾಲ್ಲೂಕು ಆಡಳಿತ ಶೀಘ್ರವೇ ಜಾಗವನ್ನು ಮಂಜೂರು ಮಾಡಿಸಿಕೊಡಬೇಕು ಎಂದು ವಿಶ್ವ ಕರ್ಮ ಸಂಘದ ಅಧ್ಯಕ್ಷ ಸುರೇಶಚಾರ್ ಮನವಿ ಮಾಡಿಕೊಂಡರು.

ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸೂಕ್ತ ಸ್ಥಾನಮಾನ ಕಲ್ಪಿಸಿದರೆ, ನಮ್ಮ ಪೂರ್ವಜರ ವೈವಿದ್ಯಮಯ ಕಲಾ ಪರಂಪರೆಯನ್ನು ಉಳಿಸಿದಂತಾಗುತ್ತದೆ ಎಂದು ಅನುಪನಹಳ್ಳಿ ಶಿಲ್ಪಿ ಸುಬ್ರಮಣಿ ಚಾರಿ ತಿಳಿಸಿದರು.

ADVERTISEMENT

ಸಂದರ್ಭದಲ್ಲಿ ವಿಶ್ವಕರ್ಮ ಸಂಘದ ಉಪಾಧ್ಯಕ್ಷ ಪಿ.ಎ. ಶಂಕರಾಚಾರಿ, ಖಜಾಂಚಿಯಾದ ವಿ. ಶಂಕರಾಚಾರಿ, ಕಾರ್ಯದರ್ಶಿ ಮುನಿಶ್ಯಾಮಚಾರಿ, ರಾಜಗೋಪಾಲಚಾರಿ, ಪಿಲ್ಲಗುಂಪೆಯ ಗೋವಿಂದಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.