
ಆನೇಕಲ್ ತಾಲ್ಲೂಕಿನ ಗಟ್ಟಹಳ್ಳಿ ಗ್ರಾಮದಲ್ಲಿ ಶ್ರೀ ಕನಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು
ಆನೇಕಲ್: ತಾಲ್ಲೂಕಿನ ಗಟ್ಟಹಳ್ಳಿಯಲ್ಲಿ ಶ್ರೀಕನಕ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ರಾಮದ ಕನಕದಾಸರ ಪುತ್ಥಳಿಗೆ ಅಲಂಕಾರ ಮಾಡಲಾಗಿತ್ತು. ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸ್ತ್ರೀಶಕ್ತಿ ಸಂಘಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಗಳ ಸದಸ್ಯರನ್ನು ಸನ್ಮಾನಿಸಲಾಯಿತು.
ಸಮ ಸಮಾಜದ ನಿರ್ಮಾಣಕ್ಕೆ ಕನಕದಾಸರ ತತ್ವ ಮತ್ತು ಸಿದ್ದಾಂತ ಇಂದಿನ ಅಗತ್ಯ ಎಂದು ಕುರುಬರ ಸಂಘದ ನಿರ್ದೇಶಕ ಗಟ್ಟಹಳ್ಳಿ ಆಂಜಿನಪ್ಪ ಹಾಗೂ ಕನಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಭಿಪ್ರಾಯಪಟ್ಟರು.
ಕೇಂದ್ರ ಮಾಜಿ ಸಚಿವ ಈ ನಾರಾಯಣಸ್ವಾಮಿ,ಶಾಸಕ ಬಿ ಶಿವಣ್ಣ, ಹಿಂದುಳಿದ ವರ್ಗಗಳ ಒಕ್ಕೂಟದ ನಿರ್ದೇಶಕ ಇಂಡ್ಲಬೆಲೆ ನರಸಿಂಹಮೂರ್ತಿ, ಗಟ್ಟಹಳ್ಳಿ ಸೀನಪ್ಪ, ರೂಪೇಶ್, ನಾಗರಾಜ್, ಅರುಣ್ ಕುಮಾರ್, ರವಿ ಕುಮಾರ್, ಬೊಮ್ಮಸಂದ್ರ ಲಿಂಗಣ್ಣ, ಹಳೆಚಂದಾಪುರ ರಾಮು, ವಿಜಯಲಕ್ಷ್ಮಿ, ರಾಮಕೃಷ್ಣಪ್ಪ,ರಮೇಶ್, ಕಾವೇರಪ್ಪ, ಬೀರೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.