ADVERTISEMENT

ಹೊಸಕೋಟೆಯಲ್ಲಿ ಮಳೆ: ರಸ್ತೆಗಿಳಿದ ಚರಂಡಿ ನೀರು

ತಾ.ಪಂ ಕಚೇರಿ ಮುಂದಿನ ರಸ್ತೆ ಅಧ್ವಾನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 14:49 IST
Last Updated 14 ಜೂನ್ 2025, 14:49 IST
ಹೊಸಕೋಟೆ ನಗರದ ತಾಲ್ಲೂಕು ಕಚೇರಿಯ ಮುಂಭಾಗ ಮಳೆ ನೀರು
ಹೊಸಕೋಟೆ ನಗರದ ತಾಲ್ಲೂಕು ಕಚೇರಿಯ ಮುಂಭಾಗ ಮಳೆ ನೀರು   

ಹೊಸಕೋಟೆ: ನಗರದಲ್ಲಿ ಶನಿವಾರ ಸಂಜೆ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಲು ತೊಂದರೆಯಾಗಿತ್ತು.

ಕೆಇಬಿ ವೃತ್ತದ ದೊಡ್ಡಗಟ್ಟಿಗನಗ್ಗೆ ರಸ್ತೆಯಲ್ಲಿ ಗಂಗಮ್ಮನ ಗುಡಿ ರಸ್ತೆಯ ಕಡೆಯಿಂದ ಹರಿಯುವ ಚರಂಡಿ ಕೊಳಚೆ ರಸ್ತೆಗೆ ಇಳಿದು ದುರ್ವಾಸನೆ ಸೃಷ್ಟಿಸಿತು. ಇದರಿಂದ ಗುಂಡಿ ರಸ್ತೆಯ ಜೊತೆಗೆ ದುರ್ನಾತವನ್ನು ವಹಿಸಿಕೊಂಡು ಸವಾರರು ಓಡಾಡಬೇಕಾಯಿತು.

ಇದೇ ರಸ್ತೆಯ ಇಕ್ಕೆಲಗಳಲ್ಲಿ ನೀರು ನಿಂತು, ಪಾದಚಾರಿಗಳಿಗೆ ತೊಂದರೆಯಾಯಿತು. ತಾಲ್ಲೂಕಿನ ಶಕ್ತಿ ಕೇಂದ್ರ ತಾಲ್ಲೂಕು ಕಚೇರಿಯ ಮುಂಭಾಗದ ರಸ್ತೆಯಲ್ಲಿಯೂ ಸಹ ಮಳೆ ನೀರಿನಿಂದ ತುಂಬಿತು. ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲದ ತಾಲ್ಲೂಕು ಕಚೇರಿ ಮುಂಭಾಗವೇ ಮಳೆ ನೀರು ಸಂಗ್ರಹವಾಗಿತ್ತು. 

ADVERTISEMENT
ಹೊಸಕೋಟೆ ಕೆಇಬಿ ವೃತ್ತದ ಬಳಿ ಚರಂಡಿ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿತು
ಸರ್ಕಾರಿ ಪದವಿ ಕಾಲೇಜು ರಸ್ತೆಯ ಗುಂಡಿಯಲ್ಲಿ ಮಳೆ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.