
ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ‘ಸೀಸನ್ ಆಫ್ ಸ್ಮೈಲ್ಸ್’ 12ನೇ ವರ್ಷದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಜನವರಿ 15ರವರೆಗೆ ನಡೆಯಲಿರುವ ಈ ಕಾರ್ಯಕ್ರಮಗಳು ಪ್ರಯಾಣಿಕರಿಗೂ ಹಬ್ಬದ ಖುಷಿ ಹೆಚ್ಚಿಸಲಿವೆ.
ವಿಮಾನ ನಿಲ್ದಾಣವನ್ನು ಕ್ರಿಸ್‌ಮಸ್ ಥೀಮ್‌ನ ಅಲಂಕಾರಗಳಿಂದ ಸಿಂಗಾರಿಸಲಾಗಿದೆ. ಆಗಮಿಸುವ ಪ್ರಯಾಣಿಕರು ಮಾತ್ರವಲ್ಲದೆ, ಭೇಟಿ ನೀಡುವ ಸಾರ್ವಜನಿಕರೂ ಹಬ್ಬದ ಕಂಪು ಚೆಲ್ಲುತ್ತದೆ. ಮಕ್ಕಳಿಗೆ ಸಂತಾ ಕ್ಲಾಸ್ ಕಾಣಿಸಿಕೊಳ್ಳುವ ಕ್ಷಣಗಳು ವಿಶೇಷ ಉಲ್ಲಾಸ ತಂದಿಡಲಿವೆ.
ಕ್ರಿಸ್‌ಮಸ್ ಮರದ ದೀಪಾಲಂಕಾರ, ಕ್ಯಾರಲ್ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಟಾ ಪೆರೇಡ್‌ಗಳು, ಕೇಕ್ ಮಿಕ್ಸಿಂಗ್ ಸಂಭ್ರಮ, ವಿಶಿಂಗ್ ಟ್ರೀಗಳು, ಲೈವ್ ಸಂಗೀತ ಕಾರ್ಯಕ್ರಮಗಳು ಹಾಗೂ ಪಾಪ್-ಅಪ್ ಸಿನೆಮಾ ಪ್ರದರ್ಶನ ನಡೆಯಲಿದೆ. ಹೊಸ ವರ್ಷ ಸ್ವಾಗತಕ್ಕೆ ನ್ಯೂ ಇಯರ್ ಈವ್ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.