
ಪ್ರಜಾವಾಣಿ ವಾರ್ತೆ
ಕುಂದಾಣ (ದೇವನಹಳ್ಳಿ): ತಾಲ್ಲೂಕಿನ ಕೊಯಿರಾ ಗ್ರಾಮದ ಭೀಮೇಶ್ವರ ಸ್ವಾಮಿ ಸನ್ನಿಧಿ ಆವರಣದಲ್ಲಿ ಈಚೆಗೆ ಕುಂದಾಣ ಹಿಂದೂ ಸಮಾಜೋತ್ಸವ ಸಮಿತಿಯಿಂದ ಹಿಂದೂ ಸಮಾಜೋತ್ಸವ ನಡೆಯಿತು.
ಶಿಕ್ಷಕ ಮಲ್ಲಿಕಾರ್ಜುನ ಗಣಿ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗೆ ಹಿಂದೂ ಧರ್ಮದ ಸಂಸ್ಕೃತಿ, ಆಚಾರ–ವಿಚಾರಗಳ ಅರಿವು ಪ್ರತಿಯೊಬ್ಬರಲ್ಲೂ ಬೆಳೆಬೇಕು ಎಂದರು.
ದೇಶದ ಸಂಸ್ಕೃತಿ ಮತ್ತು ಪರಂಪರೆ ನಮ್ಮದು ಎಂಬ ಭಾವನೆ ಮಕ್ಕಳಲ್ಲೇ ಬೆಳೆಬೇಕು. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ನಮ್ಮ ಧಾರ್ಮಿಕ ಮೌಲ್ಯಗಳನ್ನೂ ಬೋಧಿಸಬೇಕು ಎಂದು ತಿಳಿಸಿದರು.
ಅವಧೂತ ನರಸಿಂಹಮೂರ್ತಿ ಸ್ವಾಮೀಜಿ, ಹಿಂದೂ ಸಮಾಜದ ಮೂಲ ನಂಬಿಕೆ ಮಾನವೀಯ ಧರ್ಮದಲ್ಲಿದೆ. ‘ನಾನು ಮೊದಲು ಭಾರತೀಯ, ನಂತರ ಹಿಂದೂ’ ಎಂಬ ಆತ್ಮಗೌರವ ಪ್ರತಿಯೊಬ್ಬರಲ್ಲೂ ಮೂಡಬೇಕು. ಎಲ್ಲರನ್ನು ಸಮಾನವಾಗಿ ಕಾಣುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.