ADVERTISEMENT

ದೊಡ್ಡಬಳ್ಳಾಪುರ: ಚಿರತೆ ದಾಳಿ ಮೇಕೆ ಬಲಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:10 IST
Last Updated 23 ಆಗಸ್ಟ್ 2025, 2:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಗುಂಡಪ್ಪನಾಯಕನಹಳ್ಳಿ ಹೊರವಲಯದ ಹೊಲದಲ್ಲಿ ಮೇಯುತ್ತಿದ್ದ ಮೇಕೆ ಮೇಲೆ ಚಿರತೆ ದಾಳಿ ನಡೆಸಿ, ಕೊಂದು ಹಾಕಿದೆ.

ಈಶ್ವರಪ್ಪ ಎಂಬುವವರಿಗೆ ಸೇರಿರುವ ಸುಮಾರು ₹15 ಸಾವಿರ ಮೌಲ್ಯದ ಮೇಕ ಚಿರತೆ ದಾಳಿಯಿಂದ ಮೃತಪಟ್ಟಿದೆ. ಪ್ರತಿ ನಿತ್ಯದಂತೆ ಶುಕ್ರವಾರ ಸಹ ಈಶ್ವರಪ್ಪ ಅವರ ಪತ್ನಿ ತಮ್ಮ ಜಮೀನಿನ ಬಳಿ ಕುರಿ ಹಾಗೂ ಮೇಕೆ ಮೇಸಲು ತೆರಳಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿರುವ ಚಿರತೆ ಮೇಕೆಯನ್ನು ಪೊದೆಗೆ ಎಳೆದುಕೊಂಡು ಹೋಗಿ ಕೊಂದಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.