
ಪ್ರಜಾವಾಣಿ ವಾರ್ತೆ
ಸಾವು
(ಪ್ರಾತಿನಿಧಿಕ ಚಿತ್ರ)
ಆನೇಕಲ್: ತಾಲ್ಲೂಕಿನ ಹುಲಿಮಂಗಲ ಗ್ರಾಮದಲ್ಲಿ ದಾರಿಯಲ್ಲಿ ನಡೆದು ಹೋಗುತ್ತಿದ್ದ ವೃದ್ಧರೊಬ್ಬರ ಮೇಲೆ ಗೂಳಿ ಏಕಾಏಕಿ ಗುಮ್ಮಿದ್ದರಿಂದ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹುಲಿಮಂಗಲ ಗ್ರಾಮದ ರಾಮರೆಡ್ಡಿ (77) ಮೃತರು. ದಾರಿಯಲ್ಲಿ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದ ರಾಮರೆಡ್ಡಿ ಮೇಲೆ ಐದತ್ತು ಸೆಕೆಂಡುಗಳಲ್ಲಿ ಗೂಳಿ ದಾಳಿ ಮಾಡಿರುವ ವಿಡಿಯೊ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಮರೆಡ್ಡಿ ಅವರು ಪ್ರತಿ ದಿನ ಹುಲಿಮಂಗಲ ರಸ್ತೆಯಲ್ಲಿಯೇ ಓಡಾಡುತ್ತಿದ್ದರು ಎಂದಿನಂತೆ ನಡೆದು ಹೋಗುತ್ತಿರುವಾಗ ಹಿಂಬದಿಂದ ಬಂದ ಗೂಳಿ ಏಕಾಏಕಿ ಗುದ್ದಿದ್ದರಿಂದ ರಾಮರೆಡ್ಡಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.