
ಪ್ರಜಾವಾಣಿ ವಾರ್ತೆ
ಮಧುರೆ(ದೊಡ್ಡಬಳ್ಳಾಪುರ): ತಾಲ್ಲೂಕಿನ ಮಧುರೆ ಹೋಬಳಿಯ ಕುಕ್ಕನಹಳ್ಳಿ ಹಾಗೂ ಗಂಗಯ್ಯನಪಾಳ್ಯದ ಕೆರೆಯಂಗಳದಲ್ಲಿ ಮಂಗಳವಾರ ಬೆಳಗ್ಗೆ ರೈತ ರೇವಣ್ಣ ಅವರು ಮೇಕೆಗಳನ್ನು ಮೇಯಿಸಲು ಹೋಗುವ ವೇಳೆ ಚಿರತೆ ದಾಳಿ ನಡೆಸಿ ಮೇಕೆಯನ್ನು ಗಾಯಗೊಳಿಸಿದೆ.
ಚಿರತೆ ದಾಳಿಯನ್ನು ನೋಡಿದ ರೈತ ರೇವಣ್ಣ ಕಿರುಚಾಡಿ ಚಿರತೆ ಓಡಿಸಿದ್ದಾರೆ. ಕೆರೆ ಅಂಗಳದಲ್ಲಿ ಹೆಚ್ಚಿನ ಪೊದೆ ಇರುವ ಹಿನ್ನೆಲೆಯಲ್ಲಿ ಚಿರತೆಯು ಕೆರೆ ಅಂಗಳದಲ್ಲೇ ಅಡಗಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತಂತೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಹಗಲಿನ ವೇಳೆಯಲ್ಲೇ ಚಿರತೆ ಮೇಕೆ ಮೇಲೆ ದಾಳಿ ನಡೆಸಿರುವುದರಿಂದ ಈ ಭಾಗದ ರೈತರು ತೋಟಗಳ ಕಡೆಗೆ ಹೋಗಲು ಭಯಪಡುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.