ಪ್ರಾತಿನಿಧಿಕ ಚಿತ್ರ
ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಗುರುವಾರ ಅನಾರೋಗ್ಯದಿಂದ ಗಂಡು ಚಿರತೆ ಅರ್ಜುನ್ ಮೃತಪಟ್ಟಿದೆ.
ನಿರಂಜನ್ ಮತ್ತು ಸರಸ್ವತಿಗೆ ಜನಿಸಿದ್ದ ಅರ್ಜುನ್ ಚಿರತೆ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಪಯೋಥೋರಾಕ್ಸ್ ಮತ್ತು ಸೆಪ್ಟಿಸೆಮಿಯಾ ಎಂಬ ಕಾಯಿಲೆದಿಂದ ಮೃತಪಟ್ಟಿದೆ ಎಂದು ವರದಿ ಬಂದಿದೆ. ಚಿರತೆಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಉದ್ಯಾನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.