ADVERTISEMENT

ಅನಧಿಕೃತ ಕ್ಲಿನಿಕ್‌ಗೆ ಬೀಗಮುದ್ರೆ

₹ 10 ಲಕ್ಷ ಮೌಲ್ಯದ ಅಲೋಪತಿ ಔಷಧಿ ಮಾರಾಟ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 3:47 IST
Last Updated 17 ಡಿಸೆಂಬರ್ 2020, 3:47 IST
ಹೊಸಕೋಟೆಯ ಸುಜಾತ ಕ್ಲಿನಿಕ್‌ಗೆ ಜಿಲ್ಲಾ ಆರೋಗ್ಯಾಧಿಕಾರಿ ಮಂಜುಳಾ ದೇವಿ ನೇತೃತ್ವದ ತಂಡ ಬೀಗಮುದ್ರೆ ಹಾಕಿದೆ
ಹೊಸಕೋಟೆಯ ಸುಜಾತ ಕ್ಲಿನಿಕ್‌ಗೆ ಜಿಲ್ಲಾ ಆರೋಗ್ಯಾಧಿಕಾರಿ ಮಂಜುಳಾ ದೇವಿ ನೇತೃತ್ವದ ತಂಡ ಬೀಗಮುದ್ರೆ ಹಾಕಿದೆ   

ಹೊಸಕೋಟೆ: ನಗರದ ಕಾಲೇಜು ರಸ್ತೆಯಲ್ಲಿರುವ ಸುಜಾತ ಕ್ಲಿನಿಕ್‌ನಲ್ಲಿ ಅಲೋಪತಿ ಔಷಧಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಮಂಜುಳಾ ದೇವಿ ನೇತೃತ್ವದ ತಂಡ ಬುಧವಾರ ಕ್ಲಿನಿಕ್‌ಗೆ ಬೀಗಮುದ್ರೆ ಹಾಕಿತು.

ಕೆಲವು ದಿನಗಳ ಹಿಂದೆಯಷ್ಟೇ ತಾಲ್ಲೂಕು ವೈದ್ಯಾಧಿಕಾರಿ ಈ ಕ್ಲಿನಿಕ್‌ನಲ್ಲಿ ಸುಮಾರು ₹ 10 ಲಕ್ಷ ಮೌಲ್ಯದ ಅಲೋಪತಿ ಔಷಧಿಗಳನ್ನು ಜಪ್ತಿ ಮಾಡಿದ್ದರು.

ಜಿಲ್ಲಾ ಆರೋಗ್ಯಾಧಿಕಾರಿ ಮಂಜುಳಾ ದೇವಿ ಮಾತನಾಡಿ, ಕೆ.ಪಿ.ಎಂ.ಇ‌ಯಡಿ ಕ್ಲಿನಿಕ್‌ ಪರವಾನಗಿ ನವೀಕರಣಗೊಂಡಿಲ್ಲ. ಅನುಮತಿಯಿಲ್ಲದೆ ಅಲೋಪತಿ ಔಷಧಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವೈದ್ಯರಿಗೆ ನೋಟಿಸ್ ನೀಡಲಾಗಿದೆ. ಅವರು ನೀಡುವ ಉತ್ತರ ಸೂಕ್ತವಾಗಿದ್ದರೆ ಅವರಿಗೆ ಮತ್ತೆ ಕ್ಲಿನಿಕ್ ನಡೆಸಲು ಅನುಮತಿ ನೀಡಲಾಗುವುದು. ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ಡಾ.ಶ್ರೀನಿವಾಸ್, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.