ಶಿಡ್ಲಘಟ್ಟ: ನಗರದ ದಿಬ್ಬೂರಹಳ್ಳಿ ಬೈಪಾಸ್ ರಸ್ತೆಯ ಪೂಜಮ್ಮ ದೇವಾಲಯ ವೃತ್ತದಲ್ಲಿ ಲಾರಿಯೊಂದು ಸೋಮವಾರ ಮುಂಜಾನೆ ಡಿಕ್ಕಿ ಹೊಡೆದು ಹೈ ಮಾಸ್ಟ್ ದೀಪದ ಕಂಬ ಉರುಳಿ ಬಿದ್ದಿದೆ. ಮುಂಜಾನೆ ಹೆಚ್ಚು ಸಂಚಾರ ಇಲ್ಲವಾದ್ದರಿಂದ ಅಪಾಯ ತಪ್ಪಿದೆ.
ಸೋಮವಾರ ಮುಂಜಾನೆ ಸುಮಾರು 4 ಗಂಟೆಗೆ ಲಾರಿಯೊಂದು ಅತಿ ವೇಗವಾಗಿ ಬಂದು ಹೈ ಮಾಸ್ಟ್ ವಿದ್ಯುತ್ ದೀಪಗಳ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಹೈ ಮಾಸ್ಟ್ ವಿದ್ಯುತ್ ದೀಪಗಳ ಕಂಬವು ಉರುಳಿ ಬಿದ್ದಿರುವ ದೃಶ್ಯವು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಫಾಯಿ ಕರ್ಮಚಾರಿ ಕಾಲೋನಿ ಸಮಗ್ರ ಅಭಿವೃದ್ದಿ ಯೋಜನೆಯಡಿ ಈ ಹೈ ಮಾಸ್ಟ್ ವಿದ್ಯುತ್ ದೀಪದ ಕಂಬವನ್ನು ಕಳೆದ ವರ್ಷವಷ್ಟೆ ಅಳವಡಿಸಲಾಗಿತ್ತು.
ನಗರಸಭೆ ಅಧ್ಯಕ್ಷ ಎಂ.ವೆಂಕಟಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಸಿಸಿಟಿವಿ ಕ್ಯಾಮೆರಾದ ಸೆರೆಯಾದ ದೃಶ್ಯ ಪರಿಶೀಲಿಸಿದರು. ಕೂಡಲೆ ನಗರಸಭೆ ಸಿಬ್ಬಂದಿಯಿಂದ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಲಾರಿ ಮತ್ತು ಚಾಲಕನ ವಿಳಾಸ ಪತ್ತೆ ಮಾಡಿ ದೂರು ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಮತ್ತೆ ಹೈ ಮಾಸ್ಟ್ ವಿದ್ಯುತ್ ದೀಪ ಅಳವಡಿಸಲಾಗುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.