ಗುಂಪು ಹಲ್ಲೆ
– ಗೆಟ್ಟಿ ಚಿತ್ರ
ದೊಡ್ಡಬಳ್ಳಾಪುರ: ನಗರದ ಶಾಂತಿ ನಗರದ ಶನೇಶ್ವರ ದೇವಾಲಯದ ಬಳಿ ಸೋಮವಾರ ದೇವಾಲಯದಲ್ಲಿ ಧ್ವನಿವರ್ಧಕ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮಿನ ಯುವಕರ ನಡುವೆ ಮಾತಿನ ಚಕಮುಕಿ ನಡೆದಿದೆ.
ದೇವಾಲಯದಲ್ಲಿ ಭಕ್ತಿಗೀತೆ ಹಾಕಿದಾಗ ಒಂದು ಕೋಮಿನ ಯುವಕನೊಬ್ಬ, ‘ಮನೆಯೊಳಗೆ ತಾಯಿ ಮಲಗಿದ್ದು ಶಬ್ದ ಕಡಿಮೆ ಮಾಡಿ’ ಎಂದು ಹೇಳಿದ.
‘ಮಸೀದಿಯಲ್ಲಿ ಅಜಾನ್ ಕೂಗಿದಾಗ ನಾವು ಹಾಗೇ ಹೇಳುತ್ತೇವಾ?’ ಎಂದು ಮತ್ತೊಂದು ಕೋಮಿನ ಕೆಲವು ಯುವಕರು ವಾದಕ್ಕಿಳಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಘಟನೆ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ಶಾಂತಿ ಸಭೆ ನಡೆಸಿದರು.
ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸದ್ಯ ಈ ಪ್ರದೇಶದಲ್ಲಿ ಶಾಂತಿ ನೆಲೆಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ನಿಗಾ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.