ADVERTISEMENT

ಹೊಸಕೋಟೆ: ಆಂಧ್ರಪ್ರದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 14:54 IST
Last Updated 26 ಜೂನ್ 2020, 14:54 IST
ಹೊಸಕೋಟೆ ಪೋಲಿಸರು ಆಂಧ್ರಪ್ರದೇಶದಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 85 ಕೆಜಿ ಗಾಂಜಾ ಮತ್ತು ಮೂವರು ಆರೋಪಿಗಳನ್ನು ವಶಕ್ಕೆ ಪಡೆದರು 
ಹೊಸಕೋಟೆ ಪೋಲಿಸರು ಆಂಧ್ರಪ್ರದೇಶದಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 85 ಕೆಜಿ ಗಾಂಜಾ ಮತ್ತು ಮೂವರು ಆರೋಪಿಗಳನ್ನು ವಶಕ್ಕೆ ಪಡೆದರು    

ಹೊಸಕೋಟೆ: ಆಂಧ್ರಪ್ರದೇಶದಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 85ಕೆಜಿ ಗಾಂಜಾ ಮತ್ತು ಮೂವರನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ ಎ‌ಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.

ಅವರು ನಗರದ ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋಲಾರದ ಕಡೆಯಿಂದ ಬೆಂಗಳೂರಿಗೆ ಲಗ್ಗೇಜ್ ಸಾಗಿಸುವ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ನಗರದ ಹೊರವಲಯ ಎಂ.ವಿ.ಜೆ ಆಸ್ಪತ್ರೆ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ವಶಪಡಿಸಿಕೊಳ್ಳಲಾಯಿತು ಎಂದರು.

ವಾಹನದಲ್ಲಿ 85 ಕೆಜಿ ತೂಕದ ಎಲೆ, ಹೂವು, ಕಾಂಡಾ ಮಿಶ್ರಿತ ಗಾಂಜಾವನ್ನು ತರಕಾರಿ ಸಾಗಿಸುವ ಪ್ಲಾಸ್ಲಿಕ್ ಟ್ರೇಗಳಲ್ಲಿ ಸಾಗಿಸಲಾಗುತ್ತಿತ್ತು ಎಂದರು.

ADVERTISEMENT

ಕಾರ್ಯಾಚರಣೆಯಲ್ಲಿ ಆರೋಪಿಗಳಾದ ರಮೇಶ್, ಸೀನು, ಇಕ್ರಂ ಅಹಮದ್ ಖಾನ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಹೊಸಕೋಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎನ್.ಬಿ.ಸಕ್ರಿ ನೇತೃತ್ವದಲ್ಲಿ ಸಿಪಿಐ ವಿ.ಡಿ. ಶಿವರಾಜು, ಹೊಸಕೋಟೆ ಪಿಎಸ್‌ಐ ಸಿ.ಎಂ.ರಾಜು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.