ADVERTISEMENT

ವಿಜಯಪುರ: ಔಷಧೀಯ ಗುಣದ ತಂಗಡಿ ಗಿಡ

ಮನೆಮದ್ದಿಗೆ ಎಲ್ಲೆಡೆ ಬಳಕೆಯಾಗುವ ಬಹುಪಯೋಗಿ ಸಸ್ಯ

ಎಂ.ಮುನಿನಾರಾಯಣ
Published 23 ಸೆಪ್ಟೆಂಬರ್ 2020, 2:20 IST
Last Updated 23 ಸೆಪ್ಟೆಂಬರ್ 2020, 2:20 IST
ವಿಜಯಪುರದ ನಾಗರಬಾವಿಯ ಸಮೀಪದಲ್ಲಿರುವ ಬಯಲಿನಲ್ಲಿ ಬೆಳೆದು ನಿಂತಿರುವ ತಂಗಡಿ ಗಿಡ
ವಿಜಯಪುರದ ನಾಗರಬಾವಿಯ ಸಮೀಪದಲ್ಲಿರುವ ಬಯಲಿನಲ್ಲಿ ಬೆಳೆದು ನಿಂತಿರುವ ತಂಗಡಿ ಗಿಡ   

ವಿಜಯಪುರ: ‘ಮಧುಮೇಹಕ್ಕೆಮನೆ ಮದ್ದನ್ನು ಖರ್ಚಿಲ್ಲದೆ ಮಾಡಬಹುದಾಗಿದೆ ಎಂದು ಪಂಡಿತ ನಾರಾಯಣಪ್ಪ ಹೇಳುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಯಥೇಚ್ಛವಾಗಿ ಕಾಣ ಸಿಗುವ ತಂಗಡಿ ಗಿಡ ಬೆಳೆದುಕೊಂಡಿರುತ್ತದೆ. ಅನೇಕ ಔಷಧೀಯ ಗುಣ ಹೊಂದಿರುವ ಈ ಗಿಡದ ಪ್ರತಿಯೊಂದು ಭಾಗವೂ ಉಪಯುಕ್ತವಾದದ್ದು. ‘ಜೀವಕ್ಕೆ ತಂಪು ಜುಟ್ಟಿಗೆ ಭದ್ರ’ ಎಂದು ಗ್ರಾಮೀಣ ಜನರು ಇದನ್ನು ವ್ಯಾಖ್ಯಾನಿಸುತ್ತಾರೆ.

ಈ ಗಿಡದ ಹೂವುಗಳಿಂದ ಮಧುಮೇಹ ನಿಯಂತ್ರಿಸಬಹುದಾಗಿದೆ.

ADVERTISEMENT

ಉಪಯೋಗ ಹೇಗೆ: ಹಳದಿ ಬಣ್ಣದ ಹೂವುಗಳ ದಳಗಳನ್ನು ಬಿಡಿಸಿ ಅವುಗಳನ್ನು ನೀರಿನಲ್ಲಿ ತೊಳೆದು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ 5 ಅಥವಾ 6 ದಳಗಳನ್ನು ಪ್ರತಿ ದಿನ ತಿನ್ನಬೇಕು. ಅಲ್ಲದೇ ಚಿಕ್ಕ ಮಕ್ಕಳಿಗೆ ಕೆಮ್ಮು, ನೆಗಡಿಯಾದರೆ ಹಾಲಿನಲ್ಲಿ ಈ ಹೂವಿನ ದಳವನ್ನು ಹಾಕಿ ಕುಡಿಸಿದರೆ ಮಕ್ಕಳ ಬಹಳ ದಿನಗಳ ಕೆಮ್ಮು ಹಾಗೂ ನೆಗಡಿ ಗುಣಮುಖವಾಗುತ್ತದೆ.

ಈ ಗಿಡದ ಚಕ್ಕೆಯನ್ನು ಅಡಕೆಯ ಬದಲಾಗಿ ಎಲೆಯೊಂದಿಗೆ ತಾಂಬೂಲದ ಜೊತೆಯಲ್ಲಿ ಜಗಿಯಲು ಈ ಹಿಂದೆ ಹಿರಿಯರು ಬಳಸುತ್ತಿದ್ದರು. ಈಗಲು ಕೆಲವರು ಅಡಿಕೆ ಬೇಯಿಸುವ ಸಂದರ್ಭದಲ್ಲಿ ತಂಗಡಿ ಚೆಕ್ಕೆ ಹಾಕಿ ಬೇಯಿಸುತ್ತಾರೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಕೈ, ಕಾಲು, ಕಣ್ಣು ಉರಿಯಲು ಪ್ರಾರಂಭವಾದಾಗ ಬೇಯಿಸಿದ ಹರಳೆಣ್ಣೆ ತಲೆಗೆ ಹಚ್ಚಿ ತಂಗಡಿ ಸೊಪ್ಪನ್ನು ತಲೆಗೆ ಕಟ್ಟಿಕೊಂಡರೆ ಸಾಕು. ದೇಹದ ಉಷ್ಣಾಂಶ ಕಡಿಮೆಯಾಗಿ ಸಮತೋಲನವಾಗುತ್ತದೆ. ಇದನ್ನು ಗ್ರಾಮೀಣ ಭಾಗದಲ್ಲಿ ಇಂದಿಗೂ ಕೆಲವರು ರೂಢಿಸಿಕೊಂಡು ಬಂದಿದ್ದಾರೆ. ಆದರೆ ಅನೇಕರಿಗೆ ತಂಗಡಿ ಗಿಡ, ಹೂವು, ಸೊಪ್ಪು ಹಾಗೂ ಚೆಕ್ಕೆಯ ಮಹತ್ವ ತಿಳಿದಿಲ್ಲ ಎನ್ನುತ್ತಾರೆ ನಾರಾಯಣಪ್ಪ.

ಗ್ರಾಮೀಣ ಭಾಗದಲ್ಲಿನ ರೈತರು, ಎತ್ತುಗಳ ಕೆಳಗೆ ಗೊಬ್ಬರದೊಂದಿಗೆ ತಂಗಡಿ ಗಿಡಗಳನ್ನು ಹಾಕಿ ಮಲಗಲು ಬಿಡುತ್ತಿದ್ದರು. ಇದರಿಂದ ಗಂಜಲ ಎತ್ತುಗಳಿಗೆ ಮೆತ್ತಿಕೊಳ್ಳದಂತೆ ನೋಡಿಕೊಳ್ಳುತ್ತಿದ್ದರು. ದನಗಳ ದೇಹದಲ್ಲಿ ಚರ್ಮ ಕಾಯಿಲೆಗಳಿದ್ದರೂ ಈ ಗಿಡದಲ್ಲಿನ ಔಷಧಿಯ ಗುಣಗಳಿಂದಾಗಿ ವಾಸಿಯಾಗುತ್ತಿತ್ತು. ಈ ಗಿಡದ ಎಲೆಗಳ ಎರಡು ಬದಿಯಲ್ಲಿ 10 ಕಿರುಪತ್ರಗಳು ಅಭಿಮುಖವಾಗಿ ಜೋಡಣೆಗೊಂಡಿದ್ದು ಪ್ರತಿ ಶಾಖೆಯ ತುದಿಯಲ್ಲಿ 5 ದಳಗಳಿಂದ ಕೂಡಿದ ಹಳದಿ ಬಣ್ಣದ ಆಕರ್ಷಕ ಹೂವುಗಳು ಗೊಂಚಲುಗಳಲ್ಲಿ ಸಮಾವೇಶಗೊಂಡಿರುತ್ತವೆ. ಸುಮಾರು 7 ರಿಂದ 11 ಸೆಂಟಿಮೀಟರ್ ಉದ್ದದ ಹಸಿರು ಬಣ್ಣದ ನೀಳ,ದ ತೆಳುವಾದ ಕಾಯಿ ಗೊಂಚಲುಗಳಲ್ಲಿ ಕಾಣಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.