ADVERTISEMENT

ಮತ ಚಲಾಯಿಸದೆ ಅಯ್ಯಪ್ಪಗೆ ಶರಣೆಂದ ಸದಸ್ಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 1:58 IST
Last Updated 11 ಡಿಸೆಂಬರ್ 2021, 1:58 IST
ಹೊಸಕೋಟೆ ನಗರಸಭೆಯಲ್ಲಿ ಸಂಸದ ಬಿ.ಎನ್. ಬಚ್ಚೇಗೌಡ ಮತ ಚಲಾಯಿಸಿದರು
ಹೊಸಕೋಟೆ ನಗರಸಭೆಯಲ್ಲಿ ಸಂಸದ ಬಿ.ಎನ್. ಬಚ್ಚೇಗೌಡ ಮತ ಚಲಾಯಿಸಿದರು   

ಹೊಸಕೋಟೆ: ವಿಧಾನ ಪರಿಷತ್ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ
ಶೇ 99.48ರಷ್ಟು ಮತದಾನವಾಗಿದೆ.

ಒಟ್ಟು 582 ಮತಗಳ ಪೈಕಿ 579 ಮತಗಳು ಚಲಾವಣೆಯಾಗಿವೆ. ಕಸಬಾ ಹೋಬಳಿಯ ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಅನುಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಜಡಗೇನಹಳ್ಳಿ ಹೋಬಳಿಯ ಓರೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಹಕ್ಕು ಚಲಾಯಿಸಿಲ್ಲ ಎಂದು ತಿಳಿದುಬಂದಿದೆ.

ಕುಂಬಳಹಳ್ಳಿ ಪಂಚಾಯಿತಿ ಸದಸ್ಯ ಶಬರಿಮಲೆಗೆ ಹೋದ ಕಾರಣ ಮತ ಚಲಾವಣೆ ಮಾಡಿಲ್ಲ. ಉಳಿದ ಇಬ್ಬರು ಮತ ಚಲಾವಣೆ ಮಾಡದಿರುವುದಕ್ಕೆ ನಿರ್ದಿಷ್ಟ ಕಾರಣ ತಿಳಿದು
ಬಂದಿಲ್ಲ.

ADVERTISEMENT

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಎಂಎಲ್‌ಸಿಗಳು ಮತ ಚಲಾಯಿಸುವ ಹಕ್ಕು ಹೊಂದಿಲ್ಲ. ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.