ADVERTISEMENT

‘ಸಂಗೀತದಿಂದ ಮಾನಸಿಕ ಆರೋಗ್ಯ’

ದೊಡ್ಡಬಳ್ಳಾಪುರದಲ್ಲಿ ಗಾಯಕಿ ಬಿ.ಕೆ.ಸುಮಿತ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 13:17 IST
Last Updated 6 ಜುಲೈ 2019, 13:17 IST
ಗಾಯಕಿ ಡಾ.ಬಿ.ಕೆ. ಸುಮಿತ್ರ ಅವರನ್ನು ಅಭಿನಂದಿಸಲಾಯಿತು
ಗಾಯಕಿ ಡಾ.ಬಿ.ಕೆ. ಸುಮಿತ್ರ ಅವರನ್ನು ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ: ಮಾನಸಿಕ ಸಮಸ್ಯೆಗಳಿಂದ ಮುಕ್ತವಾಗಬೇಕಿದ್ದರೆ ಮಕ್ಕಳಿಗೆ ಪಠ್ಯದೊಂದಿಗೆ ಸಾಹಿತ್ಯ ಸಂಗೀತದ ಅಭಿರುಚಿ ಬೆಳೆಸಬೇಕಿದೆ ಎಂದು ಖ್ಯಾತ ಗಾಯಕಿ ಡಾ.ಬಿ.ಕೆ.ಸುಮಿತ್ರ ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ನಡೆದ ಎರಡು ದಿನಗಳ ಉಚಿತ ಸಮೂಹ ಗೀತ ಗಾಯನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮಕ್ಕಳಿಗೆ ಪಠ್ಯ ಚಟುವಟಿಕೆಗಳು ಎಷ್ಟು ಪೂರಕವೋ ಅಷ್ಟೇ ಮುಖ್ಯ ಸಹಪಠ್ಯ ಚಟುವಟಿಕೆ. ಅದರಲ್ಲೂ ಸಂಗೀತ ಮತ್ತು ಸಾಹಿತ್ಯ ನಮ್ಮ ಬದುಕಿನ ಸಂವೇದನೆಗಳನ್ನು ಹೆಚ್ಚಿಸುತ್ತದೆ. ಸಂಗೀತದಿಂದ ಮನಸ್ಸಿನ ಏಕಾಗ್ರತೆ ವೃದ್ಧಿಸುವುದಲ್ಲದೆ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ADVERTISEMENT

ಮಕ್ಕಳು ಇಂದು ಸಾಮಾಜಿಕ ಜಾಲತಾಣಗಳಿಗೆ ಮಾರುಹೋಗಿ ಮಾನಸಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಮುಕ್ತರಾಗಬೇಕಾದರೆ ಶಾಲೆಗಳಲ್ಲಿ ಸಂಗೀತ ತರಗತಿಗಳನ್ನು ನಡೆಸುವ ಮೂಲಕ ಮಕ್ಕಳಿಗೆ ಮಾನಸಿಕ ಚೈತನ್ಯ ನೀಡಬೇಕು ಎಂದರು.

ಕಾರ್ಯಾಗಾರದಲ್ಲಿ 5 ಗೀತೆಗಳಿಗೆ ‘ಎದೆ ತುಂಬಿ ಹಾಡಿದನು’ ಖ್ಯಾತಿಯ ಸಂಗೀತ ನಿರ್ದೇಶಕ ಬಿ.ವಿ.ಶ್ರೀನಿವಾಸ ರಾಗ ಸಂಯೋಜನೆ ಮಾಡಿದರು. ಸ್ವಾಮಿ ವಿವೇಕಾನಂದ ಕನ್ನಡ ಶಾಲೆಯ 647 ಮಕ್ಕಳಿಗೆ ಏಕ ಕಾಲದಲ್ಲಿ 5 ಕವನಗಳಿಗೆ ಸಂಗೀತ ರಚನೆ ಮಾಡುವ ಮೂಲಕ ಮಕ್ಕಳಿಗೆ ಗಾಯನ ಹೇಳಿಕೊಟ್ಟರು. ಶಾಲೆಯ ಮುಖ್ಯ ಶಿಕ್ಷಕ ಡಾ.ಹುಲಿಕಲ್ ನಟರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಡಿಮಂಚೇನಹಳ್ಳಿ ಕಾಂತಪ್ಪ ಮತ್ತು ಶಶಿಕಲಾ ಕಾಂತಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.