ADVERTISEMENT

ಸೂಲಿಬೆಲೆ | ಹಾಲು ಕರೆಯುವ ಸ್ಪರ್ಧೆ: ಸತೀಶ್‌ಗೌಡ ರಾಸು ಪ್ರಥಮ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:41 IST
Last Updated 24 ಜನವರಿ 2026, 6:41 IST
ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಸಿದ ಶಾಸಕ ಶರತ್‌ ಬಚ್ಚೇಗೌಡ ಮತ್ತಿತರರು
ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಸಿದ ಶಾಸಕ ಶರತ್‌ ಬಚ್ಚೇಗೌಡ ಮತ್ತಿತರರು   

ಸೂಲಿಬೆಲೆ(ಹೊಸಕೋಟೆ): ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ  ಬಿ.ವಿ ಸತೀಶ್ ಗೌಡ ಅವರು ರಾಸು ಪ್ರಥಮ, ಕುರುಬರಪೇಟೆ ಪ್ರಶಾಂತ್‌ ರಾಸು ದ್ವಿತೀಯ, ನಾಗನಾಯಕನಕೋಟೆಯ ಮಣಿಕಂಠ ರಾಸು ತೃತೀಯ, 

ಮುತ್ಸಂದ್ರದ ಅಭಿ ರಾಸು 4ನೇ ಸ್ಥಾನ, ಬ್ಯಾಲಹಳ್ಳಿ ಅನಿಲ್ ಕುಮಾರ್ ರಾಸುಗೆ 5ನೇ ಸ್ಥಾನ ದೊರೆಯಿತು. ವಿಜೇತ ರಾಸುಗಳಿಗೆ ಕ್ರಮವಾಗಿ ₹1 ಲಕ್ಷ, ₹75 ಸಾವಿರ, ₹50 ಸಾವಿರ, ₹25 ಸಾವಿರ, ₹10 ಸಾವಿರ ನಗದು ಬಹುಮಾನ ವಿತರಿಸಲಾಯಿತು. 20 ಜನರಿಗೆ ಸಮಾಧನಕರ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು ಹಾಲು ಒಕ್ಕೂಟ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ADVERTISEMENT

ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಶಾಸಕ ಶರತ್ ಬಚ್ಚೇಗೌಡ ಬಹುಮಾನ ವಿತರಿಸಿದರು.

ಬಮುಲ್ ನಿರ್ದೇಶಕ ಬಿ.ವಿ.ಸತೀಶ್ ಗೌಡ ವೈಯುಕ್ತಿಕವಾಗಿ ಹಾಲು ಕರೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡ 40ಕ್ಕೂ ಹೆಚ್ಚು ರಾಸುಗಳಿಗೆ ಬೂಸಾ, ಹಿಂಡಿ ಮತ್ತು ಮೇವನ್ನು ಉಚಿತವಾಗಿ ವಿತರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಭೈರೇಗೌಡ, ಕೆ.ಎಸ್. ಸುರೇಶ್, ಎಂ.ಬಿ. ವೆಂಕಟೇಶ್, ಬಮೂಲ್ ನಿರ್ದೇಶಕ ಕೆ.ಎಂ. ಮಂಜುನಾಥ್, ಕೇಶವಮೂರ್ತಿ, ಡಿ.ಟಿ. ವೆಂಕಟೇಶ್, ಶಿವಾಜಿ ನಾಯಕ್, ಸಿ.ಎನ್.ನಾರಾಯಣಸ್ವಾಮಿ, ಹೊಸಕೋಟೆ ಶಿಬಿರದ ಉಪ ವ್ಯವಸ್ಥಾಪಕ ಶ್ರೀರಾಮ್, ದೊಡ್ಡಅರಳಗೆರೆ ಗ್ರಾ.ಪಂ. ಅಧ್ಯಕ್ಷೆ ಶಿವಕುಮಾರಿ, ಹಸಿಗಾಳ ಜಗದೀಶ್, ಸುಬ್ಬಣ್ಣ, ವಿನಯ್ ಇದ್ದರು.

₹2 ಪ್ರೋತ್ಸಾಹ ಧನ ಹೆಚ್ಚಳಕ್ಕೆ ಮನವಿ

ರಾಜ್ಯ ಸರ್ಕಾರ ಈಗಾಗಲೇ ಹೈನುಗಾರರಿಗೆ ಪ್ರತಿ ಲೀಟರ್‌ಗೆ ₹5 ‍ಪ್ರೋತ್ಸಾಹ ಧನ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿ ವಸ್ತು ಬೆಲೆ ದುಬಾರಿ ಆಗುತ್ತಿರುವ ಕಾರಣ ಮತ್ತೊಮ್ಮೆ ಪ್ರೋತ್ಸಾಹ ಧನ ಹೆಚ್ಚಳಕ್ಕೆ ರೈತರು ಹಲವು ಬಾರಿ ಮನವಿ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಮತ್ತೆ ಪ್ರತಿ ಲೀಟರ್‌ಗೆ ₹2 ಹೆಚ್ಚಳ ಮಾಡಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.